Karnataka One

Information of Karnataka

Saturday 5 September 2020

ವೃತ್ತ ಪರಿಚಯ

Admin       Saturday 5 September 2020

 

ವೃತ್ತ ಎಂದರೇನು?. 

ಸ್ಥಿರಬಿಂದುವಿನಿ0ದ ಸಮದೂರದಲ್ಲಿರುವ ಅನಂತಬಿ0ದುಗಳ ಗಣವನ್ನು ವೃತ್ತ ಎನ್ನುತ್ತೇವೆ .

ತ್ರಿಜ್ಯ ಎಂದರೇನು ?.

ವೃತ್ತಕೇಂದ್ರದಿ0ದ ವೃತ್ತಪರಿಧಿಗೆ ಇರುವ ದೂರವನ್ನು ತ್ರಿಜ್ಯ ಎನ್ನುತ್ತೇವೆ .

ಪರಿಧಿ ಎಂದರೇನು ?.

ವೃತ್ತವನ್ನು ಆವರಿಸಿರುವ ವಕ್ರರೇಖೆಯನ್ನು ಪರಿಧಿ ಎನ್ನುತ್ತೇವೆ .

ವೃತ್ತಕಂಸ ಎಂದರೇನು ?.

ವೃತ್ತಪರಿಧಿಯ ತುಂಡಾದ ಭಾಗವನ್ನು ವೃತ್ತಕಂಸ ಎನ್ನುತ್ತೇವೆ .

ವೃತ್ತಕಂಸಗಳಲ್ಲಿ ಎಷ್ಟು ವಿಧ ?. ಅವು ಯಾವುವು ?.

ವೃತ್ತಕಂಸಗಳಲ್ಲಿ 3 ವಿಧ .ಅವುಗಳೆಂದರೇ 

ಲಘುವೃತ್ತ ಕಂಸ .

ಅಧಿಕ ವೃತ್ತ ಕಂಸ .

ಅರ್ಧವೃತ್ತ ಕಂಸ.

ಜ್ಯಾ ಎಂದರೇನು ?.

ವೃತ್ತಪರಿಧಿಯ ಮೇಲಿನ ಯಾವುದೇ ಎರಡು ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು ಜ್ಯಾ ಎನ್ನುತ್ತೇವೆ .

ವ್ಯಾಸ ಎಂದರೇನು ?.

ಕೇಂದ್ರದ ಮೂಲಕ ಹಾದುಹೋಗುವ ಜ್ಯಾವನ್ನು ವ್ಯಾಸ ಎನ್ನುತ್ತೇವೆ .

ವ್ಯಾಸವು 2 ತ್ರಿಜ್ಯಗಳಿಗೆ ಸಮನಾಗಿರುತ್ತದೆ .

ವೃತ್ತಖಂಡ ಎಂದರೇನು ?.

ವೃತ್ತಕಂಸ ಮತ್ತು ಜ್ಯಾಗಳಿಂದ ಆವೃತವಾದ ಸಮತಲವನ್ನು ವೃತ್ತಖಂಡ ಎನ್ನುತ್ತೇವೆ.

ವೃತ್ತಖಂಡÀಗಳಲ್ಲಿ ಎಷ್ಟು ವಿಧ ?. ಅವು ಯಾವುವು ?.

ವೃತ್ತಖಂಡಗಳಲ್ಲಿ 3 ವಿಧ .ಅವುಗಳೆಂದರೇ 

ಲಘುವೃತ್ತ ಖಂಡ.

ಅಧಿಕ ವೃತ್ತಖಂಡ.

ಅರ್ಧವೃತ್ತಖAಡ.

ವೃತ್ತಖ0ಡದಲ್ಲಿನ ಕೋನಗಳ ಬಗ್ಗೆ ಟಿಪ್ಪಣಿ ಬರೆಯಿರಿ.

ಲಘುವೃತ್ತಖಂಡದಲ್ಲಿನ ಕೋನಗಳು ವಿಶಾಲಕೋನಗಳಾಗಿರುತ್ತವೆ .

ಅಧಿಕವೃತ್ತಖಂಡದಲ್ಲಿನ ಕೋನಗಳು ಲಘುಕೋನಗಳಾಗಿರುತ್ತವೆ .

ಅರ್ಧವೃತ್ತಖಂಡದಲ್ಲಿನ ಕೋನಗಳು ಲಂಬಕೋನಗಳಾಗಿರುತ್ತವೆ .

• ಒಂದೇ ವೃತ್ತಕಂಸದ ಮೇಲಿನ ಕೋನಗಳು ಪರಸ್ಪರ ಸಮನಾಗಿರುತ್ತವೆ .

• ಒಂದು ವೃತ್ತಕಂಸವು ಕೇಂದ್ರದಲ್ಲಿ ಏರ್ಪಡಿಸುವ ಕೋನವು , ಅದೇ ಕಂಸವು ಪರಿಧಿಯಲ್ಲಿ ಏರ್ಪಡಿಸುವ ಕೋನದ ಎರಡಷ್ಟಿರುತ್ತದೆ .

logoblog

Thanks for reading ವೃತ್ತ ಪರಿಚಯ

Previous
« Prev Post

3 comments: