Karnataka One

Information of Karnataka

Saturday 5 September 2020

ಆಧಾರಿತ ಕಲಿಕೆಯ ಕೇಂದ್ರಗಳ ಹಿನ್ನೆಲೆ

Admin       Saturday 5 September 2020


 ಆಧಾರಿತ ಕಲಿಕೆಯ ಕೇಂದ್ರಗಳ ಹಿನ್ನೆಲೆ 

ಸಂವಿಧಾನದ ಬದ್ದತೆಯಂತೆ ಆರರಿಂದ ಹದಿನಾಲ್ಕು ಮಯೋಮಾನದ ಎಲ್ಲ ಮಕ್ಕಳಿಗೆ ಕಡ್ಡಾಯ ಮತ್ತು  ಉಚಿತ  ಸಾರ್ವತ್ರಿಕ  ಪ್ರಾಥಮಿಕ  ಶಿಕ್ಷಣ  ನೀಡುವ  ಉದ್ದೇಶದಿಂದ ಸರ್ವ  ಶಿಕ್ಷಣ  ಅಭಿಯಾನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮಕ್ಕಳು ಶಾಲೆ ಬಿಡುವ ಪ್ರಮಾಣ ಮತ್ತು ಪುನರಾವರ್ತನೆಯಾಗುವ ದರವನ್ನು ಕಡಿತಗೊಳಿಸಿ, ಕಲಿಕೆಯ ಸಾಧನೆಯ ಮಟ್ಟ ಹೆಚ್ಚಿಸಿ ಸಂತಸದಾಯಕ ಕಲಿಕೆಯ ಪ್ರಕ್ರಿಯೆ ಮೂಡಿಸುವುದು ಈ ಯೋಜನೆಯ ಮೂಲ ಗುರಿಯಾಗಿದೆ.  ಇದರಿಂದಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆ ಅಗತ್ಯವಾಗಿದ್ದು ಕಂಪ್ಯೂಟರ್‌ಗಳನ್ನು ಕಂಪ್ಯೂಟರ್ ಆಧಾರಿತ ಕಲಿಕೆಗಾಗಿ ಬಳಸುವ ಮೂಲಕ ಉದ್ದೇಶವನ್ನು ಸಾಧಿಸಬೇಕಾಗಿದೆ.   ಆದುದರಿಂದ ಸರ್ವ ಶಿಕ್ಷಣ ಅಭಿಯಾನ ಆವಿಷ್ಕೃತ ಚಟುವಟಿಕೆಯಡಿಯಲ್ಲಿ “ಕಂಪ್ಯೂಟರ್ ಆಧಾರಿತ ಕಲಿಕೆಯ ಕೇಂದ್ರ” ಕಾರ್ಯಕ್ರಮವನ್ನು ಯೋಜಿಸಲಾಗಿದೆ.

ಹಂತ ಹಂತವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಕಲಿಕೆಯ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.

ಕಂಪ್ಯೂಟರ್ ಆಧಾರಿತ ಕಲಿಕಾ ಕೇಂದ್ರಗಳು ಎಂದರೇನು?

ಹೆಸರೇ ಸೂಚಿಸುವಂತೆ ಇದು ಕೇವಲ ಕಂಪ್ಯೂಟರ್ ಬಳಕೆ ಬಗ್ಗೆ ಶಿಕ್ಷಣವಾಗಿರದೇ, ಕಂಪ್ಯೂಟರ್ ಆಧಾರಿತ ಕಲಿಕೆಯಾಗಿದೆ. ಅಂದರೆ ಈಗ ಶಾˉÉಗಳಲ್ಲಿ ರೇಡಿಯೋ ಬಳಸಿ ಪಠ್ಯಕ್ರಮಕ್ಕೆ ಪೂರಕವಾದ ಪಾಠಗಳನ್ನು ಕೇಳಿಸುವಂತೆ ಡಿಜಿಟರ್ ಪಾಠಗಳನ್ನು ಕಲಿಕೆಯ ವಿವಿಧ ಹಂತಗಳಲ್ಲಿ ಸಮರ್ಪಕವಾಗಿ ಬಳಸಿ ಮಕ್ಕಳಲ್ಲಿ ನಿರೀಕ್ಷಿತ ಕಲಿಕೆಯ ಫಲಗಳನ್ನು ಮೂಡಿಸಬೇಕಾಗಿದೆ.  ಇದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪರಿಣಾಮಕಾರಿ ಪ್ರಗತಿ ಸಾಧ್ಯವೆಂದು ನಿರೀಕ್ಷಿಸಲಾಗಿದೆ.

ಕಂಪ್ಯೂಟರ್ ಸಹಾಯಿತ ಕಲಿಕಾ ಕೇಂದ್ರಗಳ ಉದ್ದೇಶಗಳು:

  • ಮಕ್ಕಳಲ್ಲಿ ಕಲಿಕೆಯ ಪ್ರಕ್ರಿಯೆಯಲ್ಲಿ ಮೂಲಭೂತ ಪರಿಕಲ್ಪನೆಗಳನ್ನು ಮೂಡಿಸುವುದು;
  • ತರಗತಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಸಹಕಾರಿಯಾಗುವ ತಂತ್ರಜ್ಞಾನ ಸಾಧನವನ್ನು ಶಿಕ್ಷಕರಿಗೆ ಒದಗಿಸುವುದು;
  • ವಿಭಿನ್ನ ಕಲಿಕೆಯ ಮಟ್ಟಗಳಲ್ಲಿರುವ ಮಕ್ಕಳನ್ನು ಉದ್ದೇಶಿಸಲು ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡುವುದು;
  • ಮಕ್ಕಳಲ್ಲಿ    ನಿರ್ದಿಷ್ಟ    ಕಲಿಕೆಯನ್ನು    ಮೂಡಿಸಲು    ಕಂಪ್ಯೂಟರ್    ತಂತ್ರಜ್ಞಾನವನ್ನು ಬಳಸಿಕೊಳ್ಳುವುದರೊಂದಿಗೆ ಶಿಕ್ಷಕರು ಸ್ವತ: ಕಂಪ್ಯೂಟರ್ ಬಳಸಿ ಸಿದ್ದಪಡಿಸುವ ಸಂಪನ್ಮೂಲಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಬೇಕು.
  • ಮಕ್ಕಳಲ್ಲಿ ತಂತ್ರಜ್ಞಾನ ಬಳಕೆ ಮೂಲಕ ಹೆಚ್ಚಿನ ಜ್ಞಾನ ನಿರ್ಮಾಣಕ್ಕೆ ಬುನಾದಿ ನಿರ್ಮಿಸುವುದು;
  • ಮಕ್ಕಳಲ್ಲಿ ವೀಕ್ಷಣೆಯ/ಆಟದ ಮೂಲಕ ಕಲಿಕೆಯನ್ನುಂಟುಮಾಡುವುದು.
  • ಶಿಕ್ಷಕರಲ್ಲಿ   ವಿಷಯ   ಜ್ಞಾನದ   ವೃದ್ಧಿಗೆ   ಬೆಂಬಲಿಸುವ   ತಂತ್ರಜ್ಞಾನದ   ವ್ಯವಸ್ಥೆಯನ್ನು ಒದಗಿಸುವುದರೊಂದಿಗೆ ಹೊಸ ವಿಧಾನಗಳ ಅನ್ವೇಷಣೆಗೆ ಮತ್ತು ಮಕ್ಕಳಲ್ಲಿ ಇದೇ ಆಸಕ್ತಿಯನ್ನು ಹೆಚ್ಚಿಸಲು ಪ್ರೇರೇಪಿಸುವುದು;
  • ತಂತ್ರಜ್ಞಾನದ ಬಳಕೆಯಲ್ಲಿ ಶಿಕ್ಷಕರನ್ನು ಸಬಲರನ್ನಾಗಿಸುವುದು ಹಾಗೂ ಪ್ರತಿಯೊಬ್ಬ ಶಿಕ್ಷಕ ಮಕ್ಕಳ ಕಲಿಕೆಯಲ್ಲಿ ಇದನ್ನು ಸಮರ್ಪಕವಾಗಿ ಬಳಸಲು ಬೆಂಬಲ ನೀಡುವುದು; 
  • ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಲ್ಲಿ ತಂತ್ರಜ್ಞಾನ ಬಳಕೆ ಮತ್ತು ಕಲಿಕೆಯಲ್ಲಿ ಇರುವ ತಾರತಮ್ಯವನ್ನು ನಿವಾರಿಸಿ ಗ್ರಾಮೀಣ ಮಕ್ಕಳ ಮನೋಸ್ಥೆöÊರ್ಯವನ್ನು ಹೆಚ್ಚಿಸುವುದು;
  • ಕಂಪ್ಯೂಟರ್ ಮೂಲಕ ಶಿಕ್ಷಣದ ಅವಕಾಶಗಳನ್ನು ಪರಿಚಯ ಮಾಡಿಸುವುದು;
  • ಶಿಕ್ಷಕರು   ಮತ್ತು   ವಿದ್ಯಾರ್ಥಿಗಳು   ಕಂಪ್ಯೂಟರ್‌ಗಳನ್ನು   ಬೋಧನೆ-ಕಲಿಕೆಗೆ   ಬಳಸಲು ಸಮರ್ಥರಾಗಿಸುವುದು.

 ಕಂಪ್ಯೂಟರ್‌ನ ಬಳಕೆಯಲ್ಲಿ ಮುಖ್ಯವಾಗಿ ಮಾಡಬೇಕಾದ ಹಾಗು ಮಾಡಬಾರದ ಅಂಶಗಳು:

ಮಾಡಬೇಕಾದವುಗಳು

1.  ಕಂಪ್ಯೂಟರ್ ಸಹಾಯಿತ ಕೇಂದ್ರಗಳಲ್ಲಿ ಸ್ವಚ್ಛತೆ ಅವಶ್ಯ. ಆದುದರಿಂದ ಕಂಪ್ಯೂಟರ್ ಕೇಂದ್ರದೊಳಗೆ ಧೂಳು ಬಾರದಂತೆ ಸೂಕ್ತ ವ್ಯವಸ್ಥೆ ಮಾಡಿ.

2. ಕಂಪ್ಯೂಟರ್‌ಗಳನ್ನು  ಉಪಯೋಗಿಸದೇ  ಇರುವ   ಸಂದರ್ಭದಲ್ಲಿ  ಅವುಗಳನ್ನು   ಡಸ್ಟ್ ಕವರ್‌ಗಳಿಂದ ಮುಚ್ಚಿಡಿ

3. ಕಂಪ್ಯೂಟರ್‌ಗಳನ್ನು ಆನ್ ಮಾಡುವ ಮೊದಲು ಸಿಪಿಯು, ಮಾನಿಟರ್, ಹಾಗು ಸ್ಪೀಕರಿನ ಪ್ಲಗ್‌ಗಳು  ಪವರ್  ಸಾಕೆಟ್‌ಗೆ  ಸರಿಯಾಗಿ  ಕನೆಕ್ಟ್  ಆಗಿದೆಯೇ  ಎಂಬುದನ್ನು  ಖಾತ್ರಿ‌ ಪಡಿಸಿಕೊಳ್ಳಿ. ಆನಂತರ ಪವರ್ ಸ್ವಿಚ್ ಆನ್ ಮಾಡಿದನಂತರವೇ ಸಿಸ್ಟಂ ಆನ್ ಮಾಡಿರಿ.

4. ಕಂಪ್ಯೂಟರ್‌ಗಳನ್ನು ಉಪಯೋಗಿಸದೇ ಇರುವಾಗ  ಸುರಕ್ಷತೆಯ  ದೃಷ್ಟಿಯಿಂದ  ಅವುಗಳ ಪವರ್‌ಪ್ಲಗ್‌ಗಳನ್ನು ಸಾಕೆಟ್‌ನಿಂದ ತೆಗೆದಿಡಿ

5. ಮಾನಿಟರ್,ಕೀ-ಬೋರ್ಡ್, ಸ್ಪೀಕರ್, ಪ್ರಿಂಟರ್ ಮತ್ತು ಮೈಕ್ರೋ ಫೋನ್‌ಗಳನ್ನು ಸಿಪಿಯು ಗೆ ಅಳವಡಿಸಿರುವುದನ್ನು ಸ್ವಿಚ್ ಆನ್ ಮಾಡುವ ಮೊದಲು ಖಾತ್ರಿ ಪಡಿಸಿಕೊಳ್ಳಿರಿ.

ಮಾಡಬಾರದ ಅಂಶಗಳು:

1.  ಕಂಪ್ಯೂಟರ್ ಆಫ್ ಮಾಡಲು ಪವರ್ ಸ್ವಿಚ್‌ಗಳನ್ನು ನೇರವಾಗಿ ಬಳಸಬಾರದು. ಸರಿಯಾದ ವಿಧಾನವೆಂದರೆ ಕಂಪ್ಯೂಟರ್‌ನ ಸ್ಕ್ರೀನ್‌ನಲ್ಲಿ ‘start’ ಬಳಿ ಮೌಸಿನ ಬಾಣವನ್ನು ಇಟ್ಟು ಎಡಬಟನ್ ಕ್ಲಿಕ್ ಮಾಡಿದಾಗ ಒಂದು ಮೆನು ಕಾಣುವುದು. ಅದರಲ್ಲಿ ‘shut down’ ’ಅಥವ ‘turn off’ ಎಂದು ಕಾಣುವ ಮೆನುವಿನ ಮೇಲೆ ಕ್ಲಿಕ್ ಮಾಡಿ. ಆನಂತರ ಕಾಣುವ ವಿಂಡೋಸ್‌ನಲ್ಲಿ ‘turn off’  ಅನ್ನು ಕ್ಲಿಕ್ಕಿಸಿದರೆ ಕಂಪ್ಯೂಟರ್ ತಾನಾಗಿಯೇ ಸ್ವಿಚ್ ಆಫ್ ಆಗುವುದು. ಆನಂತರ ಪವರ್ ಸಾಕೆಟ್‌ಗಳನ್ನು ಸ್ವಿಚ್ ಆಫ್ ಮಾಡಿರಿ.

2. ಕಂಪ್ಯೂಟರ್ ಆನ್ ಆಗಿರುವಾಗ ಅದನ್ನು ಸ್ಥಳಾಂತರಿಸಬೇಡಿರಿ. ಯಾವುದೇ ಉಪಕರಣವನ್ನು ‘connect/disconnect’  ಮಾಡಬೇಡಿರಿ.

3. ಕಂಪ್ಯೂಟರ್‌ನ ಯಾವುದೇ ಭಾಗದ ಮೇˉÉ ನೀರು ಅಥವ ಯಾವುದೇ ರೀತಿಯ ದ್ರವ ಪಧಾರ್ಥ ಬೀಳದಂತೆ ಎಚ್ಚರಿಕೆ ವಹಿಸಿರಿ. 

4. ಸಿಡಿಗಳನ್ನು ಧೂಳಿನಿಂದ ರಕ್ಷಿಸಿರಿ.  ಸಿಪಿಯು  ಹತ್ತಿರ    ಟಿವಿ,  ರೇಡಿಯೋ, ಮೊಬೈಲ್‌ಗಳನ್ನು‌ ಇಡಬೇಡಿರಿ.

5. ಮೌಸ್‌ಗಳನ್ನು ಮೌಸ್‌ಪ್ಯಾಡ್ ಬಳಸದೇ ಉಪಯೋಗಿಸಬೇಡಿರಿ.

6. ಕಂಪ್ಯೂಟರ್ ಹ್ಯಾಂಗ್ ಆದಾಗ ನೇರವಾಗಿ ಸ್ವಿಚ್ ಆಫ್ ಮಾಡಬೇಡಿ. 

logoblog

Thanks for reading ಆಧಾರಿತ ಕಲಿಕೆಯ ಕೇಂದ್ರಗಳ ಹಿನ್ನೆಲೆ

Previous
« Prev Post

No comments:

Post a Comment