"ದೀರ್ಘಾಯುಷ್ಯ ಮಾತ್ರೆ" ಅಭಿವೃದ್ಧಿಪಡಿಸಿದ ಚೀನಾ...! ಮನುಷ್ಯರು 150 ವರ್ಷಗಳ ಕಾಲ ಬದುಕಲು ಸಾಧ್ಯವೇ?

ಶುಕ್ರವಾರ 21 ನವೆಂಬರ್ 2025

 ಈ "ದೀರ್ಘಾಯುಷ್ಯ ಮಾತ್ರೆ" ನಿಜವಾಗಿಯೂ ಮನುಷ್ಯರ ಬದುಕಿನ ಗಾತ್ರವನ್ನು 150 ವರ್ಷಗಳಿಗೆ ವಿಸ್ತರಿಸಬಹುದೇ!...

ಚೀನಾದ ಶೆನ್ಜೆನ್ ಮೂಲದ ಬಯೋಟೆಕ್ ಕಂಪನಿಯೊಂದು ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾದ ಮಹತ್ವದ ಹೇಳಿಕೆಯನ್ನು ಹೊರಬಿಟ್ಟಿದೆ. ಮನುಷ್ಯರು ಮುಂದಿನ ದಿನಗಳಲ್ಲಿ 150 ವರ್ಷಗಳವರೆಗೆ ಬದುಕಲು ಸಹಾಯಕವಾಗುವ ವಿಶೇಷ ದೀರ್ಘಾಯುಷ್ಯ ಮಾತ್ರೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಕಂಪನಿ ತಿಳಿಸಿದೆ.

ಏನಿದು ದೀರ್ಘಾಯುಷ್ಯ  ಮಾತ್ರೆ?

ಕಂಪನಿಯ ಪ್ರಕಾರ ಈ ಹೊಸ ಔಷಧವು ಮಾನವ ದೇಹದಲ್ಲಿರುವ ಸೆನೆಸೆಂಟ್ ಸೆಲ್ಸ್ ಅಥವಾ ವಿಜ್ಞಾನಿಗಳು ಕರೆಯುವಂತೆ "ಜೊಂಬಿ ಸೆಲ್ಸ್" ಗಳನ್ನು ಗುರಿಯಾಗಿರುತ್ತದೆ. ಆದರೆ ದೇಹದಲ್ಲಿ ಉರಿಯೂತ ವಯೋ ಸಹಜ ಸಮಸ್ಯೆಗಳು ಹಾಗೂ ವಿವಿಧ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತದೆ. 

ಇಲಿಗಳ ಮೇಲಿನ ಪ್ರಯೋಗ 

ವರದಿಗಳ ಪ್ರಕಾರ ಇಲಿಗಳ ಒಟ್ಟಾರೆ ಜೀವಿತಾವಧಿಯಲ್ಲಿ 9.4% ಏರಿಕೆ ಕಂಡು ಬಂದಿದೆ .ಚಿಕಿತ್ಸೆಯ ನಂತರ ಅವುಗಳ ಉಳಿದ ಜೀವಿತಾವಧಿಯಲ್ಲಿ 64% ಗಿಂತ ಹೆಚ್ಚು ಸುಧಾರಣೆ ಕಂಡು ಬಂದಿದೆ.ಕಂಪನಿಯ ಅಧಿಕಾರಿ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ " ಮನುಷ್ಯರು 150 ವರ್ಷಗಳವರೆಗೆ ಬದುಕುವುದು ಭವಿಷ್ಯದಲ್ಲಿ ಸಾಧ್ಯ" ಮುಂದಿನ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ನೋಡಲಿದ್ದೇವೆ ಎಂದು ಹೇಳಿದ್ದಾರೆ.
ಹಿಂದಿನಂತೆ ದೀರ್ಘಾಯುಷ್ಯವನ್ನು ಶ್ರೀಮಂತ ಅಮೆರಿಕನ್ನರ ಆಸಕ್ತಿ ಎಂದು ಪರಿಗಣಿಸಲಾಗುತ್ತಿತ್ತು . ಆದರೆ ಈಗ ಅನೇಕ ಚೀನಿ ನಾಗರಿಕರು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದಾರೆ.

 ತಜ್ಞರ ಎಚ್ಚರಿಕೆ 

ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದು ಇಲಿಗಳ ಮೇಲೆ ಕಂಡು ಬಂದ ಯಶಸ್ಸು ಪ್ರಾಥಮಿಕ ಅಂತ ಮಾತ್ರ ಇದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಲು ವ್ಯಾಪಕ ಹಾಗೂ ದೀರ್ಘಕಾಲೀನ ಮಾನವ ಪ್ರಯೋಗಗಳು ಅಗತ್ಯ. ಚೀನಾದ ಹೊಸ ಸಂಶೋಧನೆ ದೀರ್ಘಾಯುಷ್ಯ ಕುರಿತು ವಿಶ್ವದಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟಿಸಿದೆ . ಆದರೆ ಈ ದೀರ್ಘಾಯುಷ್ಯ ಮಾತ್ರೆ ನಿಜವಾಗಿಯೂ ಮನುಷ್ಯರ ಬದುಕಿನ ಗಾತ್ರವನ್ನು 150 ವರ್ಷಗಳಿಗೆ ವಿಸ್ತರಿಸಬಹುದೇ ಎಂಬುದನ್ನು ತಿಳಿಸಲು ಇನ್ನೂ ಹೆಚ್ಚಿನ ವೈಜ್ಞಾನಿಕ ಪರಿಶೀಲನೆ ಅಗತ್ಯ. 

Post a Comment