ನಿಮ್ಮ ಅಂಗೈಯಲ್ಲಿದೆ ಅದೆಷ್ಟೋ ಕಾಯಿಲೆಗಳಿಗೆ ದಿವ್ಯೌಷಧ!!

 ನಿಮ್ಮ  ಅಂಗೈಯಲ್ಲಿದೆ  ಅದೆಷ್ಟೋ ಕಾಯಿಲೆಗಳಿಗೆ ದಿವ್ಯೌಷಧ!!

ಗುರುವಾರ 20 ನವೆಂಬರ್ 2025

ಮೆಂತ್ಯವನ್ನು ತಿಳಿಯದವರು ಯಾರು ಇಲ್ಲ .ಇದನ್ನು ಪ್ರತಿ ಮನೆಯಲ್ಲೂ ಅಡುಗೆಯಲ್ಲಿ ಬಳಸಲಾಗುತ್ತದೆ.  ಮೆಂತ್ಯ ಬೀಜಗಳನ್ನು ಮಸಾಲೆಗಳ ಜೊತೆಗೆ ಅನೇಕ ಭಕ್ಷ ಗಳಲ್ಲಿ ಬಳಸಲಾಗುತ್ತದೆ ಮೆಂತ್ಯ ಬೀಜಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಮಹಿಳೆಯರ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಹಾಗಾದರೆ ಮೆಂತ್ಯ ಬೀಜಗಳು ಯಾವ ಸಮಸ್ಯೆಗಳಿಗೆ ಪರಿಣಾಮಕಾರಿ ಎಂದು ಇಲ್ಲಿ ತಿಳಿಯೋಣ .


ಮೆಂತ್ಯದಲ್ಲಿರುವ ಫೈಟೋ ಇಸ್ಟ್ರೋಜೆನ್ ಅಂಶಗಳು ಮಹಿಳೆಯರ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ .ಮೆಂತ್ಯ ಬೀಜಗಳು ಅನಿಯಮಿತ ಚಕ್ರ ಮನಸ್ಥಿತಿ ಬದಲಾವಣೆಗಳು ಮತ್ತು ಪಿಸಿಓಎಸ್  ಗೆ ಬಹಳ ಪ್ರಯೋಜನಕಾರಿ . ಮೆಂತ್ಯ ನೀರು ಮುಟ್ಟಿನ ಸಮಯದಲ್ಲಿ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ ಮೆಂತ್ಯವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ . ಇದು ತಲೆನೋವು ಮತ್ತು ಹೊಟ್ಟೆ ನೋವಿನಿಂದ ಪರಿಹಾರ ನೀಡುತ್ತದೆ. ಆದರೂ ವೈದ್ಯರನ್ನು ಸಂಪರ್ಕಿಸಿ ನಂತರ ಮೆಂತ್ಯ ಸೇವಿಸುವುದು ಉತ್ತಮ.


ನೆನೆಸಿದ ಮೆಂತ್ಯ ಬೀಜಗಳು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಹೀಗಾಗಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಮೆಂತ್ಯೆದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ,ಮೊಡವೆಗಳನ್ನು ಕಡಿಮೆ ಮಾಡುತ್ತದೆ, ಕೂದಲು ಉದುರುವಿಕೆ ಮತ್ತು ತಲೆ ಹೊಟ್ಟು ಕಡಿಮೆ ಮಾಡುತ್ತದೆ. ಮೆಂತ್ಯ ಬೀಜಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. 


ಇದು ಪಿಸಿಓಎಸ್ ನಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಂತ್ಯವು ಹೆಚ್ಚು  ಫೈಬರ್ ನಿಂದ ಸಮೃದ್ಧವಾಗಿದೆ   ಇದು ಆಮ್ಲೀಯತೆ ಮತ್ತು  ಮಲಬದ್ಧತೆ ಅಂತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅದಕ್ಕಾಗಿಯೇ ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಮೆಂತ್ಯವನ್ನು ಸೇರಿಸಿಕೊಳ್ಳಬೇಕು .



Post a Comment