ಪೊಲೀಸರ ಯಶಸ್ವಿ ಕಾರ್ಯಾಚರಣೆ..!ಕೊನೆಗೂ ಸಿಕ್ಕಿತು ರಾಬರಿಯಾಗಿದ್ದ ಕೋಟಿ ಕೋಟಿ ಹಣ ...!

ಶುಕ್ರವಾರ 21 ನವೆಂಬರ್ 2025

ಕೊನೆಗೂ ಸಿಕ್ಕಿತು ರಾಬರಿಯಾಗಿದ್ದ ಕೋಟಿ ಕೋಟಿ ಹಣ ...!

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ . ದರೋಡೆಗಾರರು ತಮಿಳುನಾಡಿನ ಚೆನ್ನೈಗೆ ತೆರಳಿದ್ದು ತಿಳಿದು ಬಂದು ಚೆನ್ನೈ ಪೋಲೀಸರು 6.3 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಈ ದರೋಡೆಯಲ್ಲಿ ಸಿಎಂಎಸ್ (CMS)ಸೆಕ್ಯೂರಿಟಿ ಮಾಜಿ ಸಿಬ್ಬಂದಿ ಮತ್ತು ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಅವರನ್ನು ಚೆನ್ನೈಯಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಘಟನೆಯ ಹಿನ್ನೆಲೆಯಲ್ಲಿ ನವೆಂಬರ್ 19ರ ಬುಧವಾರ ಮಧ್ಯಾನ 4:30ರ ಸುಮಾರಿಗೆ ಅಶೋಕ ಪಿಲ್ಲರ್ ಜಂಕ್ಷನ್ ಬಳಿಯ ರಸ್ತೆಯಲ್ಲಿ ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯ ಎಟಿಎಂ ಕ್ಯಾಶ್ ವ್ಯಾನ್ ಗೆ ಆರ್‌ಬಿಐ ಅಧಿಕಾರಿಗಳಂತೆ 5-6 ದರೋಡೆಗಾರರು ದಾಳಿ ಮಾಡಿದ್ದರು .ಇನೋವಾ ಕಾರಿನಲ್ಲಿ ಬಂದ ಆರೋಪಿಗಳು ಸಿಬ್ಬಂದಿಯನ್ನು ದಮಕಿ ಹಾಕಿ 7.11 ಕೋಟಿ ರೂಪಾಯಿ ನಗದು ದೋಚಿಕೊಂಡು ಹೋಗಿದ್ದರು. ದರೋಡೆಕಾರರು ವ್ಯಾನ್ ನ DVR (ಸಿಸಿಟಿವಿ ರೆಕಾರ್ಡ್) ಸಹ ತೆಗೆದುಕೊಂಡಿದ್ದರಿಂದ ಆಂತರಿಕ ದೃಶ್ಯಗಳು ಲಭ್ಯವಾಗಿಲ್ಲ. ದರೋಡೆಯ ನಂತರ 45 ನಿಮಿಷಗಳಲ್ಲಿ ಕಾಲ್ ಬಂದಿದ್ದು ಇನ್ಸೈಡ್ ಸಹಾಯದ ಶಂಕೆ ಮೂಡಿತು .

ತನಿಕೆಯಲ್ಲಿ ದರೋಡೆಯ ಮಾಸ್ಟರ್ ಮೈಂಡ್ ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಎಂದು ಬಹಿರಂಗವಾಯಿತು.  ಅಣ್ಣಪ್ಪ ನಾಯ್ಕ ಕಳೆದ ಆರು ತಿಂಗಳುಗಳಿಂದ ಸಿಎಂಎಸ್ ಮಾಜಿ ಉದ್ಯೋಗಿ ರಾಜು (ಕೇರಳ ನಿವಾಸಿ) ಜೊತೆಗೆ ಯೋಜನೆ ಮಾಡಿದ್ದರು. ಅಣ್ಣಪ್ಪ ನಾಯ್ಕ ಪೊಲೀಸ್ ಪ್ರೊಸೀಜರ್ ತಿಳಿದಿದ್ದರಿಂದ ಹುಡುಗರ ಗ್ಯಾಂಗನ್ನು ರೆಕ್ರೂಟ್ ಮಾಡಿ ದರೋಡೆಯ ತಂತ್ರಗಳನ್ನು ಕಲಿಸಿದ್ದರು .  ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಿಂದ ಬಂದ ಹುಡುಗರು ಈ ಗ್ಯಾಂಗ್ ಅಲ್ಲಿ ಇದ್ದರು.  ರಾಜು ಸಿ ಎಂ ಎಸ್ ಮಾಜಿ ಸಿಬ್ಬಂದಿಯಾಗಿದ್ದು ವ್ಯಾನ್ ರೂಟ್ ಮತ್ತು ಸಮಯದ ಮಾಹಿತಿ ನೀಡಿದ್ದ .

ಪೊಲೀಸರು 6.3 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದು ಉಳಿದ ಹಣವನ್ನು ಇನ್ನೂ ಹುಡುಕಲಾಗುತ್ತಿದೆ. ಕರ್ನಾಟಕ ಪೊಲೀಸ್ ನ ಎಂಟು ವಿಶೇಷ ತಂಡಗಳು (200 ಕ್ಕೂ ಹೆಚ್ಚು ಸಿಬ್ಬಂದಿ) ಮತ್ತು ತಮಿಳುನಾಡು ಪೋಲಿಸ್ ಸಹಕಾರದಿಂದ ಈ ಯಶಸ್ಸು ಸಾಧ್ಯವಾಯಿತು. ಮೊಬೈಲ್ ಟ್ರ್ಯಾಕಿಂಗ್, ಸಿಸಿಟಿವಿ ದೃಶ್ಯಗಳು ಮತ್ತು ಬಾರ್ಡರ್ ಚೆಕ್ ಪಾಯಿಂಟ್ ಗಳ ಮೂಲಕ ಆರೋಪಿಗಳನ್ನು ಹಿಡಿದಿದ್ದಾರೆ. 

Post a Comment