ಎಚ್ಚರ ಎಚ್ಚರ ಕಾಫಿ ಜೊತೆ ರಸ್ಕ್ ತಿನ್ನುತ್ತಿದ್ಧೀರ ! ಗಂಭೀರ ಸಮಸ್ಯೆಗಳು ಎದುರಾಗಬಹುದು .....

ರಸ್ಕ್ ಪ್ರಿಯರೇ ಎಚ್ಚರ ಗಂಭೀರ ಸಮಸ್ಯೆಗಳು ಎದುರಾಗಬಹುದು!..

ಗುರುವಾರ 20 ನವೆಂಬರ್ 2025

ಬಹುತೇಕ ಮನೆಗಳಲ್ಲಿ ಬೆಳಿಗ್ಗೆ ಪ್ರಾರಂಭವಾಗುವುದೇ ಒಂದು ಕಪ್ ಚಹಾ ಹಾಗು ರಸ್ಕ್ ನಿಂದ . ಆದರೆ ತಜ್ಞರ ಪ್ರಕಾರ ರಸ್ಕ್ ಸೇವಿಸುವುದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ವರದಿ ಮಾಡಿದ್ದಾರೆ . ಇದರ ಪ್ರಕಾರ ರಸ್ಕ್ ಗಳು  ಟ್ರಾನ್ಸ್ ಕೊಬ್ಬುಗಳು ಸಕ್ಕರೆ ಮತ್ತು  ಗ್ಲುಟೇನ್ನಿಂದ ತುಂಬಿರುತ್ತದೆ ಇದು ಕ್ರಮೇಣ ಚಯಾಪಚಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ರಸ್ಕ್ ಗಳು ಬ್ರೆಡ್ ಗಿಂತ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ ಸುಮಾರು 100 ಗ್ರಾಂ ರಸ್ಕ್ ಬಿಸ್ಕತ್ತುಗಳು ಸುಮಾರು  407 ಕಿಲೋ ಕ್ಯಾಲೋರಿಗಳನ್ನು ಹೊಂದಿರಬಹುದು.  

ರಸ್ಕ್ ಬಿಸ್ಕತ್ತುಗಳನ್ನು ತಯಾರಿಸಲು ಬಳಸುವ ಮುಖ್ಯ ಪದಾರ್ಥವೆಂದರೆ ಈಸ್ಟ್ ,ಸಕ್ಕರೆ, ಎಣ್ಣೆ ಮತ್ತು ಮೈದಾ ಹಿಟ್ಟು ಆದರೆ ಅಂಗಡಿಗಳಲ್ಲಿ ಖರೀದಿಸಿದ ಹೆಚ್ಚಿನ ರಸ್ಕಲ್ಲಿ ಹಳಸಿದ ಬ್ರೆಡ್ಗಳನ್ನು ರಸ್ಕ್ ಅನ್ನು ತಯಾರಿಸಲು ಬಳಸುತ್ತಾರೆ .ಅವಧಿ ಮೀರಿದ ಹಳಸಿದ ಬ್ರೆಡ್ ಗಳು ರೋಗಕಾರಕಗಳು ಇದು ಅತಿಸಾರ ಮಲಬದ್ಧತೆ ಮತ್ತು ಆಹಾರ ವಿಷವಾಗುವುದಕ್ಕೆ ಕಾರಣವಾಗಬಹುದು. ಚಹಾದಲ್ಲಿ ಸಕ್ಕರೆಯನ್ನು ಸೇರಿಸುವುದರಿಂದ ತಕ್ಷಣವೇ ಸಂತೃಪ್ತಿಯನ್ನು ನೀಡಬಹುದು ಆದರೆ ಅದೇ ಸಮಯದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಮೂಲಕ ಇನ್ಸುಲಿನ್ ಮಟ್ಟದ ಮೇಲೆ ಪರಿಣಾಮ ಬೀರಬಹುದು .ಪ್ರತಿದಿನ ರಸ್ಕ್ ಸೇವಿಸುವುದರಿಂದ ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾಗಬಹುದು ಎನ್ನಲಾಗಿದೆ . ಬ್ರೆಡ್ ಗಳಂತೆಯೇ ರಸ್ಕ್ ಗಳಲ್ಲಿಯೂ ಹೆಚ್ಚಿನ ಪ್ರಮಾಣದ ಗ್ಲುಟೇನ್ ಅಂಶ ಇರುತ್ತದೆ  ಇದು ದೇಹಕ್ಕೆ ಜೀವಿಸಿಕೊಳ್ಳಲು ಕಷ್ಟವಾಗುತ್ತದೆ. 

ಜನರು  ರಸ್ಕನ್ನು ಸೇವಿಸಲು ಕಡಿಮೆ ಮಾಡಬೇಕು ಏಕೆಂದರೆ ಕೆಲವು ಸಂದರ್ಭದಲ್ಲಿ ಉಬ್ಬರ ಮತ್ತು ಅತಿಸಾರಕ್ಕೆ ಕಾರಣವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ರಸ್ಕ್ ಅನ್ನು ಚಹಾದೊಂದಿಗೆ ಅಥವಾ ಹಾಲಿನೊಂದಿಗೆ ಸೇರಿಸಿದಾಗ ಇದು ಕ್ಯಾಲೋರಿ ಯನ್ನು ಹೆಚ್ಚಿಸುತ್ತದೆ ಬೊಜ್ಜು ಮತ್ತು ಹೃದಯದ ಕಾಯಿಲೆಗಳ ಅಪಾಯಕ್ಕೆ ಕಾರಣವಾಗಬಹುದು.

Post a Comment