ತೀವ್ರವಾಗಿ ಏರಿಕೆಯಾಗಿದೆ ವಾಹನ ಫಿಟ್ನೆಸ್ ಪರೀಕ್ಷಾ ಶುಲ್ಕಗಳು!...

ವಾಹನ ಫಿಟ್ನೆಸ್ ಪರೀಕ್ಷಾ ಶುಲ್ಕಗಳು ತೀವ್ರವಾಗಿ ಏರಿಕೆಯಾಗಿದೆ...

ಗುರುವಾರ 20 ನವೆಂಬರ್ 2025


ಕೇಂದ್ರ ಸರ್ಕಾರವು ದೇಶಾದ್ಯಂತ ವಾಹನ ಚಾಲಕರ ಮೇಲೆ ಹೆಚ್ಚಿನ ಹೊರೆ  ಏರಿದೆ . ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳ ಫಿಟ್ನೆಸ್ ಪರೀಕ್ಷಾ ಶುಲ್ಕವನ್ನು 10 ಪಟ್ಟು ಹೆಚ್ಚು ಹೆಚ್ಚಿಸಲು ನಿರ್ಧರಿಸಿದೆ ಕೇಂದ್ರ ಮೋಟಾರ್  ವಾಹನ ನಿಯಮಗಳಿಗೆ ಐದನೇ ತಿದ್ದುಪಡಿಯಾಗಿ ಹೊರಡಿಸಲಾದ ಈ ಹೊಸ ನಿಯಮಗಳು ತಕ್ಷಣವೇ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಲಾಗಿದೆ . ಈ ನಿರ್ಧಾರದೊಂದಿಗೆ ವಾಹನಗಳ ವಯಸ್ಸು ಮತ್ತು ವರ್ಗವನ್ನು ಅವಲಂಬಿಸಿ ಶುಲ್ಕ ರಚನೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. 

ಇಲ್ಲಿಯವರೆಗೆ ಹೆಚ್ಚಿನ ಫಿಟ್ನೆಸ್ ಶುಲ್ಕಗಳು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಮಾತ್ರ ಅನ್ವಯಿಸುತ್ತಿದ್ದವು ಹಾಗಾಗಿ ತಿದ್ದುಪಡಿಗಳ ಪ್ರಕಾರ ಈ ವಯಸ್ಸಿನ ಮಿತಿಯನ್ನು ಹತ್ತು ವರ್ಷಗಳಿಗೆ ಇಳಿಸಲಾಗಿದೆ. ಅಂದರೆ ಇಂದಿನಿಂದ ಹೆಚ್ಚಿನ ಶುಲ್ಕಗಳು 10 ವರ್ಷಗಳನ್ನು ಪೂರ್ಣಗೊಳಿಸಿದ ವಾಹನಗಳಿಗೂ ಅನ್ವಯಿಸುತ್ತದೆ. ಇದರ ಜೊತೆಗೆ ವಾಹನಗಳ ವಯಸ್ಸನ್ನು ಅವಲಂಬಿಸಿ ಶುಲ್ಕ ರಚನೆಯನ್ನು ಸಹ ಬದಲಾಯಿಸಲಾಗಿದೆ. ಹಿಂದೆ 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳಿಗೆ ಒಂದೇ  ಶುಲ್ಕವಿತ್ತು  ಆದರೆ ಈಗ ಅವುಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ.

ಮೂರು ವಿಭಾಗಗಳು ಯಾವುವೆಂದರೆ- 10 - 15 ವರ್ಷ ಹಳೆಯದು , 15 - 20 ವರ್ಷ ಹಳೆಯದು ಮತ್ತು 20 ವರ್ಷ ಮೇಲ್ಪಟ್ಟ ವಾಹನಗಳು . ವಾಹನದ ವಯಸ್ಸು ಹೆಚ್ಚಾದಂತೆ ಶುಲ್ಕವು ಅದೇ ತರದಲ್ಲಿ ಹೆಚ್ಚಾಗುತ್ತದೆ .ಈ ಹೊಸ ನೀತಿಯು ದ್ವಿಚಕ್ರ ವಾಹನಗಳು ,ತ್ರಿಚಕ್ರ ವಾಹನಗಳು , ಲಘು ಮೋಟಾರು ವಾಹನಗಳು (LMV), ಮಧ್ಯಮ ಮತ್ತು ಬಾರಿ ವಾಣಿಜ್ಯ ವಾಹನಗಳಿಗೆ ಅನ್ವಯಿಸುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಈ ಶುಲ್ಕ ಹೆಚ್ಚಳದ ಪರಿಣಾಮವು ವಾಣಿಜ್ಯ ವಾಹನಗಳ ಮೇಲೆ ವಿಶೇಷವಾಗಿ ತೀವ್ರವಾಗಿರುತ್ತದೆ. 20 ವರ್ಷಕ್ಕಿಂತ ಮೇಲ್ಪಟ್ಟ ಟ್ರಕ್ ಗಳು ಅಥವಾ ಬಸ್ ಗಳಿಗೆ ಇಲ್ಲಿಯವರೆಗೆ 2500 ಗಳಷ್ಟಿದ್ದ ಫಿಟ್ನೆಸ್ ಪರೀಕ್ಷಾ ಶುಲ್ಕವನ್ನು 25,000ಗಳಿಗೆ ಹೆಚ್ಚಿಸಲಾಗಿದೆ. ಅದೇ ವಯಸ್ಸಿನ ಮಧ್ಯಮ ವಾಣಿಜ್ಯ ವಾಹನಗಳಿಗೆ ಶುಲ್ಕವನ್ನು 1800 ಗಳಿಂದ 20000 ಗಳಿಗೆ ಹೆಚ್ಚಿಸಲಾಗಿದೆ.

ವೈಯಕ್ತಿಕ ವಾಹನಗಳ ವಿಷಯದಲ್ಲೂ ಈ  ಹೊರೆಯನ್ನು ಬಿಟ್ಟಿಲ್ಲ .20 ವರ್ಷಕ್ಕಿಂತ ಮೇಲ್ಪಟ್ಟ ಲಘು ಮೋಟಾರು ವಾಹನಗಳಿಗೆ (ಕಾರುಗಳು) ಶುಲ್ಕವನ್ನು 15000 ನಿಗದಿಪಡಿಸಲಾಗಿದೆ. ಅದೇ ರೀತಿ 20 ವರ್ಷಕ್ಕಿಂತ ಮೇಲ್ಪಟ್ಟ ತ್ರಿಚಕ್ರ ವಾಹನಗಳು( ಆಟೋಗಳು ) 7,000 ಪಾವತಿಸಬೇಕಾಗುತ್ತದೆ. 20 ವರ್ಷಕ್ಕಿಂತ ಮೇಲ್ಪಟ್ಟ ದ್ವಿಚಕ್ರ ವಾಹನಗಳ ಶುಲ್ಕವು ಮೂರು ಪಟ್ಟು ಹೆಚ್ಚಾಗಿದೆ. ಮೊದಲು ಈ ಶುಲ್ಕ 600 ಗಳಾಗಿದ್ದು ಈಗ ಅದು 2,000 ತಲುಪಿದೆ .

15 ವರ್ಷಕ್ಕಿಂತ ಕಡಿಮೆ ಹಳೆಯ ವಾಹನಗಳಿಗೂ ಶುಲ್ಕ ಹೆಚ್ಚಿಸಲಾಗಿದೆ .ನಿಯಮ 81ರ ಪ್ರಕಾರ ಮೋಟಾರ್ ಸೈಕಲ್ ಗಳಿಗೆ 400 ,ಲಘು ಮೋಟಾರು ವಾಹನಗಳಿಗೆ 600 ಮತ್ತು ಮಧ್ಯಮ ಮತ್ತು ಬಾರಿ ವಾಣಿಜ್ಯ ವಾಹನಗಳಿಗೆ 1000 ರೂ ಫಿಟ್ನೆಸ್ ಪ್ರಮಾಣಿಕರಣ  ಶುಲ್ಕವನ್ನು ವಿಧಿಸಲಾಗುತ್ತದೆ .ಹಳೆಯ ವಾಹನಗಳನ್ನು ರಸ್ತೆಗಳಿಂದ ತೆಗೆದುಹಾಕುವ ಉದ್ದೇಶದಿಂದ  ಕೇಂದ್ರವು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವಿಶ್ಲೇಷಕರು ನಂಬಿದ್ದಾರೆ. 


Post a Comment