ಇಷ್ಟು ಅಪಾಯಕಾರಿಯಾದ ಅಭ್ಯಾಸವನ್ನು ಇಂದೇ ಬಿಡಿ !...

 ಉಗುರು ಕಚ್ಚುವ ದುರಭ್ಯಾಸ ಎಷ್ಟು ಅಪಾಯಕಾರಿ ಗೊತ್ತಾ ?

ಗುರುವಾರ 20 ನವೆಂಬರ್ 2025

ಕೆಲವು ಅಭ್ಯಾಸಗಳನ್ನು ಬಿಡಬೇಕು ಎಂದುಕೊಂಡರು ಬಿಡಲು ಸಾಧ್ಯವಾಗುವುದಿಲ್ಲ .ಉಗುರು ಕಚ್ಚುವುದು ಕೂಡ ಅಂತಹ ಅಭ್ಯಾಸಗಳಲ್ಲಿ ಒಂದು .ಇದು ದೇಹಕ್ಕೆ ಹಾನಿ ಮಾಡಬಲ್ಲ ದುರಭ್ಯಾಸ.  ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ .ಉಗುರು ಕಚ್ಚುವ ಅಭ್ಯಾಸದಿಂದ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ತೊಂದರೆಯಾಗುತ್ತಿದೆ.

 ಕೈಯಲ್ಲಿರುವ ಬ್ಯಾಕ್ಟೀರಿಯಾಗಳು ಬಾಯಿಯ ಮೂಲಕ ಹೊಟ್ಟೆಯೊಳಗೆ ಹೋಗಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಉಗುರು ಕಚ್ಚುವ ಸಾಮಾನ್ಯ ವಾಗಿ ಈ ಅಭ್ಯಾಸದ ಹಿಂದೆ ಹಲವು ಕಾರಣಗಳಿರಬಹುದು. ಒತ್ತಡ ,ಆತಂಕ ಹೆಚ್ಚಾದಾಗ ಉಗುರು ಕಚ್ಚಲಾರಂಭಿಸುತ್ತಾರೆ. ಸಾಧ್ಯವಾದಷ್ಟು ಬೇಗ ಈ ಅಭ್ಯಾಸವನ್ನು ಬಿಡುವುದು ಉತ್ತಮ. ಅತಿಯಾದ ಉಗುರು ಕಚ್ಚುವಿಕೆಯಿಂದಾಗಿ ಉಗುರುಗಳಿಂದ ರಕ್ತ ಬರಲು ಪ್ರಾರಂಭಿಸುತ್ತದೆ ಇದು ಹಲ್ಲುಗಳು ವಸಡುಗಳು ಮತ್ತು ಬಾಯಿಯ ಅಂಗಾಂಶಗಳಿಗೆ ಹಾನಿ ಉಂಟುಮಾಡುತ್ತದೆ. ಉಗುರು ಕಚ್ಚುವುದರಿಂದ ಹಲ್ಲುಗಳಿಗೂ ಹಾನಿಯಾಗುತ್ತದೆ ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಈ ಅಭ್ಯಾಸವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಮತ್ತು ವ್ಯಕ್ತಿಯು ತುಂಬಾ ಅನಾರೋಗ್ಯಕ್ಕೆ ಒಳಗಾಗಬಹುದು. ಉಗುರು ಕಚ್ಚುವಿಕೆಯಿಂದಾಗಿ ವಸಡುಗಳು ದುರ್ಬಲವಾಗಬಹುದು ಮತ್ತು ಸೋಂಕಿಗೆ ಒಳಗಾಗಬಹುದು.

ಉಗುರು ಕಚ್ಚುವುದನ್ನು ತಪ್ಪಿಸುವುದು ಹೇಗೆ? 

1.ಉಗುರುಗಳನ್ನು ಆಗಾಗ ಕತ್ತರಿಸುತ್ತಿರಿ.
2.ಒತ್ತಡ ಅಥವಾ ಆತಂಕವನ್ನು ಕಡಿಮೆ ಮಾಡಿಕೊಳ್ಳಿ .
3.ಉಗುರಿನ ಮೇಲೆ ಸ್ವಲ್ಪ ಕಹಿಯನ್ನು ಹಾಕಿ ಕೊಳ್ಳಿ .
4.ನಿಮ್ಮ ಕೈಗಳನ್ನು ಸದಾ ಕಾರ್ಯನಿರತವಾಗಿರಿಸಲು ಪ್ರಯತ್ನಿಸಿ. 

Post a Comment