ವಾಯುಪುತ್ರ ಶ್ರೀ ಹನುಮ ಜಯಂತಿ - ಮಾನವತೆಗೆ ಧೈರ್ಯ, ಬಲ ಮತ್ತು ಭಕ್ತಿಯ ಅಮೃತ ನೀಡಿದ ದಿನ - ನಾವು ತಿಳಿಯಬೇಕಾದ ವಿಷಯಗಳು...


ಹನುಮಂತರು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯ ದೇವರಲ್ಲಿ ಒಬ್ಬರು. ಅವರು ಭಕ್ತಿ, ಬಲ, ಶಕ್ತಿ, ವಿನಯ, ಸೇವಾಭಾವನೆಗಳ ಪರಿಪೂರ್ಣ ರೂಪ.

ಹನುಮ ಜಯಂತಿಯನ್ನು ಹಿಂದೂ ಧರ್ಮದಲ್ಲಿ ಹನುಮಂತನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ . ಇದನ್ನು "ಆಂಜನೇಯ ಜಯಂತಿ" ಅಥವಾ "ಭಜರಂಗಬಲಿ ಜಯಂತಿ" ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಚೈತ್ರ ಮಾಸದ  ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು ಭಕ್ತರು ಉಪವಾಸ, ಪೂಜೆ ಮತ್ತು ವಿಶೇಷ ಕಾರ್ಯಕ್ರಮಗಳ ಮೂಲಕ ಹನುಮಂತನನ್ನು ಆರಾಧಿಸುತ್ತಾರೆ.

ಇತಿಹಾಸ ಮತ್ತು ಮಹತ್ವ

  • ಹನುಮಂತನು ಶಿವನ 11ನೇ ರುದ್ರ ಅವತಾರವಾಗಿದ್ದು ವಾನರ ರಾಜ ಕೇಸರಿ ಮತ್ತು ಅಂಜನಾದೇವಿಗೆ ಜನಿಸಿದನು.
  • ಹನುಮ ಜಯಂತಿಯು ಭಕ್ತಿಯನ್ನು ಮತ್ತು ನಿಷ್ಠೆಯನ್ನು ನೆನಪಿಸುತ್ತದೆ .ಹನುಮಂತನು ರಾಮನ ಬದ್ಧ ಭಕ್ತನಾಗಿದ್ದು ಸೀತೆಯನ್ನು ರಕ್ಷಿಸುವಲ್ಲಿ ರಾಮನಿಗೆ ಸಹಾಯ ಮಾಡಿದ್ದನು.
  • ಈ ಹಬ್ಬವು ಆಧ್ಯಾತ್ಮಿಕ ಪ್ರತಿಬಿಂಬ ಮತ್ತು ಆತ್ಮಾವಲೋಕನದ ಸಮಯವಾಗಿದೆ. ಭಕ್ತರು ತಮ್ಮ ಜೀವನದಲ್ಲಿ ಹನುಮಂತನ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
  • ಹನುಮ ಜಯಂತಿಯಂದು ಪೂಜೆ ಮಾಡುವುದರಿಂದ ಶನಿದೋಷ , ಮಂಗಳ ದೋಷ ,ಭಯ ಮತ್ತು ದುಷ್ಟ ಶಕ್ತಿಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗುತ್ತದೆ.

ಆಚರಣೆಗಳು

  • ಹನುಮ ಜಯಂತಿಯಂದು ಭಕ್ತರು ಹನುಮ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ.
  • ಅನೇಕರು ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು "ಹನುಮಾನ್ ಚಾಲೀಸಾ" ಮತ್ತು "ಸುಂದರಕಾಂಡ" ಪಠಿಸುತ್ತಾರೆ.
  • ಕೆಲವು ಪ್ರದೇಶಗಳಲ್ಲಿ 'ಅನ್ನಸಂತರ್ಪಣೆ 'ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
  • ಪೂಜೆಯ ಸಮಯದಲ್ಲಿ ಬೆಲ್ಲ ,ಬಾಳೆಹಣ್ಣು, ಸಿಂಧೂರ ,ಶ್ರೀಗಂಧ ಮತ್ತು ಕೆಂಪು ಹೂವುಗಳನ್ನು ಬಳಸಲಾಗುತ್ತದೆ.
  • "ಓಂ ಹಮ್ ಹನುಮತೇ ನಮಃ " ಮಂತ್ರವನ್ನು ಪಠಿಸುವುದು ಹೆಚ್ಚು ಮಂಗಳಕರ ವೆಂದು ಹೇಳಲಾಗುತ್ತದೆ.
  • ಹನುಮ ಎಂದರೆ ಬಲ, ಭಕ್ತಿ, ಶೌರ್ಯ ಮತ್ತು ವಿನಯದ ಪರಿಪೂರ್ಣರೂಪ. ಅವರ ಕಥೆಗಳು ಮತ್ತು ಗುಣಗಳು ನಮ್ಮ ಜೀವನಕ್ಕೆ ದೈರ್ಯ, ನಿಷ್ಠೆ ಮತ್ತು ಸಕಾರಾತ್ಮಕತೆಯನ್ನು ಕೊಡುತ್ತವೆ.

 

Post a Comment