ಬೇಲೂರಿನ ಜಗತ್ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು

BEST PLACES IN BELUR

 1. ಬೇಲೂರು ಚೆನ್ನಕೇಶವ ಸ್ವಾಮಿ ದೇವಾಲಯ


ಬೇಲೂರಿನ ಚೆನ್ನಕೇಶವ ದೇವಾಲಯವು  ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ 12ನೇ ಶತಮಾನದ ಹಿಂದೂ ದೇವಾಲಯವಾಗಿದೆ.

ಹಾಸನದಿಂದ 38 ಕಿಲೋಮೀಟರ್ ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಬೇಲೂರು ಹಿಂದೆ ಹೊಯ್ಸಳರ ರಾಜಧಾನಿಯಾಗಿತ್ತು. ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ ಬೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ಉದಾಹರಣೆಗಳಲ್ಲೊಂದಾದ ಚೆನ್ನಕೇಶವ ದೇವಸ್ಥಾನದಿಂದಾಗಿ ಈ ಪಟ್ಟಣವು ಪ್ರಸಿದ್ಧವಾಗಿದೆ.ಕ್ರಿ.ಶ 1116 ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ ವಿರುದ್ಧ ಸಾಧಿಸಿದ ವಿಜಯದ ನೆನಪಿಗಾಗಿ ಈ ದೇಗುಲವನ್ನು ನಿರ್ಮಿಸಿ ವಿಜಯನಾರಾಯಣ ಎಂದು ಕರೆದನು. 

ತಲುಪುವ ಬಗೆ

 ✈ ಬೇಲೂರು ಮತ್ತು ಹಾಸನದಲ್ಲಿ ಯಾವುದೇ ವಿಮಾನ ನಿಲ್ದಾಣವಿರುವುದಿಲ್ಲ ಬೆಂಗಳೂರಿನಿಂದ ಬರುವವರು ಹಾಸನಕ್ಕೆ ಬಂದು ಈ ಸ್ಥಳವನ್ನು ತಲುಪಬಹುದು

 🚉 ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ ,ಶಿವಮೊಗ್ಗ, ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ

 🚍 🚘ಬೇಲೂರು ಹಾಸನದಿಂದ 38 ಕಿಲೋಮೀಟರ್  ಮತ್ತು ಚಿಕ್ಕಮಗಳೂರಿನಿಂದ  26 ಕಿಲೋಮೀಟರ್ ದೂರದಲ್ಲಿದ್ದು ಬಸ್ ಮಾರ್ಗದ ಮೂಲಕ ಸುಲಭವಾಗಿ ಸ್ಥಳವನ್ನು ತಲುಪಬಹುದು.

ಸಮೀಪದ ಪ್ರವಾಸಿ ತಾಣಗಳು

 ದೊಡ್ಡಗದ್ದವಳ್ಳಿ 
ಬೆಳವಾಡಿ 
ಕೇದಾರೇಶ್ವರ ದೇವಾಲಯ
ಪುರಾತತ್ವ ವಸ್ತು ಸಂಗ್ರಹಾಲಯ 
ಯಗಚಿ ಜಲಾಶಯ 
 ಹಳೆಬೀಡು
ಚಿಕ್ಕಮಗಳೂರು - ಮುಳ್ಳಯ್ಯನಗಿರಿ , ಕೆಮ್ಮಣ್ಣುಗುಂಡಿ, ದೇವಿರಮ್ಮ ಬೆಟ್ಟ, ಮಾಣಿಕ್ಯದಾರ
ಶೃಂಗೇರಿ ಶಾರದಾಂಬೆ

 Location

2. ಯಗಚಿ ಜಲಾಶಯ 


 ಬೇಲೂರು ಬಸ್ ನಿಲ್ದಾಣದಿಂದ 2.5 ಕಿ.ಮೀ ದೂರದಲ್ಲಿ ಯಗಚಿ ಅಣೆಕಟ್ಟು ಇದೆ. ಕರ್ನಾಟಕದ ಬೇಲೂರು ಬಳಿ ಇರುವ ಅಣೆಕಟ್ಟು ಜಲ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಚಿಕ್ಕಮಗಳೂರು ನಗರ ಸಮೀಪವಿರುವ ಪಶ್ಚಿಮ ಘಟ್ಟದಲ್ಲಿ ಉದ್ಭವಿಸುತ್ತದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮೂಲಕ ಹರಿಯುತ್ತದೆ ಇದು ಗೊರೂರು ಬಳಿ ಪ್ರವೇಶಿಸುವ ಹೇಮಾವತಿ ನದಿಯ ಉಪನದಿ ಆಗಿರುತ್ತದೆ ಇದನ್ನು ಬದರಿ ಎಂದು ಕರೆಯುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ಬೆಟ್ಟದಲ್ಲಿ ಹುಟ್ಟಿ ದಕ್ಷಿಣ ದಿಕ್ಕಿಗೆ ಹರಿಯುತ್ತದೆ.  ಯಗಚಿ ಅಣೆಕಟ್ಟನ್ನು 2001ರಲ್ಲಿ  ಯಗಚಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.ಅಣೆಕಟ್ಟಿನ ಉದ್ದ 1280 ಮೀಟರ್ ಮತ್ತು ಎತ್ತರ 26 ಮೀಟರ್.  965 ಅಡಿ ಎತ್ತರದಲ್ಲಿರುವ ಈ ಅಣೆಕಟ್ಟನ್ನು ನೀರಾವರಿ ಉದ್ದೇಶಕ್ಕಾಗಿ ನೀರಿನ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಹಾಗೂ ಬೇಲೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬೇಡಿಕೆಗಳನ್ನು ಪೂರೈಸುವ ಉದ್ದೇಶದಿಂದ ನಿರ್ಮಿಸಲಾಗಿದೆ.

Location

ಹತ್ತಿರದ ಪ್ರವಾಸಿ ತಾಣಗಳು

Post a Comment