Karnataka One

Information of Karnataka

Friday 4 September 2020

ವಿದ್ಯಾಗಮ ಕಾರ್ಯಕ್ರಮದಲ್ಲಿ 4 ರಿಂದ 10 ನೇ ತರಗತಿಗಳಿಗೆ ಸಿದ್ದಪಡಿಸಿರುವ ಪರ್ಯಾಯ ಶೈಕ್ಷಣಿಕ ಯೋಜನೆ

Admin       Friday 4 September 2020

ವಿದ್ಯಾಗಮ ಕಾರ್ಯಕ್ರಮದಲ್ಲಿ 4 ರಿಂದ 10 ನೇ ತರಗತಿಗಳಿಗೆ ಸಿದ್ದಪಡಿಸಿರುವ ಪರ್ಯಾಯ ಶೈಕ್ಷಣಿಕ ಯೋಜನೆಯಲ್ಲಿ  ಚಟುವಟಿಕೆಗಳನ್ನು ಕೈಗೊಳ್ಳಲು ಮಾರ್ಗಸೂಚಿಗಳು

ಕೋವಿಡ್‍ನ ಸದ್ಯದ ಪರಿಸ್ಥಿತಿಯು ವಿಶೇಷವಾದ ಕಲಿವಿನ ಕ್ರಮಗಳನ್ನು ಅಳವಡಿಸಿಕೊಳ್ಳಲು, ಕಲಿವಿನ ನವೀನ ಮಾರ್ಗೋಪಾಯಗಳನ್ನು ಚಿಂತಿಸಲು ಅವಕಾಶವನ್ನು ಒದಗಿಸಿಕೊಟ್ಟಿದೆ. ತರಗತಿ ಕೊಠಡಿಯಿಂದ ಹೊರಗೆ ವಿಭಿನ್ನವಾಗಿ, ವೈವಿಧ್ಯಮಯವಾಗಿ ಹಾಗೂ ಮಕ್ಕಳು ತಮ್ಮ ಪರಿಸರದಲ್ಲಿ ಕಲಿವನ್ನು ಅನುಭವಿಸಲು ವಿಫುಲವಾದ ಅವಕಾಶಗಳನ್ನು ಒದಗಿಸಿಕೊಟ್ಟಿದೆ. ನಾಲ್ಕು ಗೋಡೆಗಳ ಮಧ್ಯೆ ತರಗತಿ ಕೊಠಡಿಗಳಲ್ಲಿ ನಡೆಯುವ ಕಲಿಕೆಯನ್ನು ತರಗತಿಯ ಹೊರಗೆ ವಿಸ್ತರಿಸಬೇಕು, ಮಕ್ಕಳು ಕಲಿವನ್ನು ಸಂತೋಷದಿಂದ ಅನುಭವಿಸಬೇಕು, ಕಲಿವಿನ ಪ್ರಕ್ರಿಯೆಗಳು ರಚನಾತ್ಮಕವಾಗಿರಬೇಕು ಎಂಬೆಲ್ಲಾ ಅಂಶಗಳನ್ನು ಸಾಧಿಸಲು ಇದು ನಮಗೆ ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿದೆ. ತರಗತಿ ಕೊಠಡಿಯ ಕಲಿವು ತರಗತಿಯಿಂದ ವಿಸ್ತಾರಗೊಂಡಷ್ಟೂ ಮಕ್ಕಳು ಕಲಿವಿನ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಶಿಕ್ಷಕರಾಗಿ ನಾವೆಲ್ಲರೂ ತಿಳಿದುಕೊಂಡಿದ್ದೇವೆ.

ಪ್ರಸ್ತುತ ಸನ್ನಿವೇಶದಲ್ಲಿ ಕಲಿಕೆಯನ್ನು ಹೇಗೆ ಆಯೋಜಿಸಬೇಕು ಎಂಬುದನ್ನು ಶಿಕ್ಷಣ ಇಲಾಖೆ ನೀಡಿರುವ ‘ವಿದ್ಯಾಗಮ’ ಸುತ್ತೋಲೆಯಲ್ಲಿ ಗಮನಿಸಬಹುದಾಗಿದೆ.   ಅದಕ್ಕೆ ಪೂರಕವಾಗಿ ಕಲಿಕೆಯನ್ನು ವಿದ್ಯಾರ್ಥಿಗಳು ಅನುಭವಿಸುವಂತೆ ಮಾಡಲು ಈ ಮುಂದಿನಂತೆ ಕೆಲವು ಅಂಶಗಳನ್ನು ಪ್ರಸ್ತಾಪಿಸಿದೆ.

  • ಒಂದು ವಿಷಯದಲ್ಲಿನ ನಿರ್ದಿಷ್ಟ ಕಲಿಕಾ ವಿಷಯಕ್ಕೆ ಸಂಬಂಧಿಸಿದಂv ವಿವಿಧ ತರಗತಿಯ (ಹಂತದ) ವಿದ್ಯಾರ್ಥಿಗಳು ಕಲಿಯಬೇಕಾಗಿರುವ ವಿಷಯಾಂಶಗಳನ್ನು ಶಿಕ್ಷಕರು ಗುರ್ತಿಸಿಕೊಳ್ಳುವುದು.

ಉದಾಹರಣೆ: ಪರಿಸರ ಅಧ್ಯಯನ/ವಿಜ್ಞಾನ ವಿಷಯದಲ್ಲಿ ಒಂದು ಕಲಿಕಾ ವಿಷಯ ‘ಆಹಾರ’ವನ್ನು  ಪರಿಗಣಿಸೋಣ: ಇದರಲ್ಲಿ ವಿವಿಧ ತರಗತಿಯ ವಿದ್ಯಾರ್ಥಿಗಳು ಅಭ್ಯಸಿಸಬೇಕಾದ ವಿಷಯಾಂಶಗಳನ್ನು ಪಟ್ಟಿ ಮಾಡಿಕೊಳ್ಳುವುದು. ಆಹಾರದ ಘಟಕಗಳು, ವಿವಿಧ ರೀತಿಯ ಆಹಾರಗಳು, ವಿವಿಧ ಬೆಳೆಗಳಿಂದ ದೊರೆಯುವ ಆಹಾರಗಳು, ದಿನವೂ ನಾವು  ಸೇವಿಸಬಹುದಾದ  ಹಣ್ಣು,  ತರಕಾರಿಗಳು,  ಆಹಾರ  ಧಾನ್ಯಗಳು,  ಸಮತೋಲನ  ಆಹಾರ  ಇತ್ಯಾದಿ

ಕಲಿಕಾಂಶಗಳನ್ನು ಪಟ್ಟಿಮಾಡಿಕೊಳ್ಳುವುದು. ಪಟ್ಟಿ ಮಾಡಿಕೊಂಡ ಕಲಿಕಾಂಶಗಳಲ್ಲಿ ಗಣಿತ ವಿಷಯದ ಮೂಲಕ ಸಮತೋಲನ ಆಹಾರ, ಆಹಾರದ ಪ್ರಮಾಣ ಇತ್ಯಾದಿ ಅಂಶಗಳನ್ನು ಅನುಪಾತ, ಪೂರ್ಣಾಂಕಗಳು, ಸಂಖ್ಯಾ ಶಾಸ್ತ್ರ ಇತ್ಯಾದಿ ಘಟಕಗಳಲ್ಲಿ ಕಲಿಸುವುದನ್ನು ಯೋಚಿಸುವುದು.

ಸಮಾಜ ವಿಜ್ಞಾನದಲ್ಲಿ ವಿವಿಧ ಬೆಳೆಗಳು, ಅವುಗಳನ್ನು ಬೆಳೆಯುವ ವಿಧಾನಗಳು ಇತ್ಯಾದಿ ಘಟಕಾಂಶಗಳನ್ನು ಗುರ್ತಿಸಿ, ಕಲಿವಿನ ಅಂಶಗಳನ್ನು ಪಟ್ಟಿಮಾಡಿಕೊಳ್ಳಬಹುದು.

ಹೀಗೆ ಪಟ್ಟಿ ಮಾಡಿಕೊಂಡ ಕಲಿಕಾಂಶಗಳನ್ನು ಯಾವ ತರಗತಿಯ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಕಲಿಸಬಹುದು ಎಂಬುದನ್ನು ಪಠ್ಯಪುಸ್ತಕದಲ್ಲಿನ ವಸ್ತು ವಿಷಯದ ಆಧಾರದಲ್ಲಿ ನಿರ್ಧರಿಸುವುದು. ಹೀಗೆ ಅಂತರ್ಗತ

ವಿಧಾನವನ್ನು ಅನುಸರಿಸಿ ಕಲಿವಿನ ಚಟುವಟಿಕೆಗಳನ್ನು ಒದಗಿಸುವುದರಿಂದ ಪಠ್ಯದ ಹೊರೆ ಕಡಿಮೆ ಆಗುವುದಲ್ಲದೇ, ಕಡಿಮೆ ಸಮಯದಲ್ಲಿ ಹೆಚ್ಚಿನ ಘಟಕಾಂಶಗಳನ್ನು ಪರಿಣಾಮಕಾರಿಯಾಗಿ ಬೋಧಿಸಬಹುದು. ಹೀಗೆ ಎಲ್ಲಾ ಘಟಕಾಂಶಗಳನ್ನು  ಒಂದೇ  ದಿನದಲ್ಲಿ  ಪೂರ್ಣಗೊಳಿಸುವಂತೆ  ಇರಬೇಕು  ಎಂಬುದೇನಿಲ್ಲ.  ಅದನ್ನು  ಒಂದು

ವಾರದವರೆಗೂ   ವಿಸ್ತರಿಸಬಹುದು.   ಇದರಿಂದ   ಕಲಿಕಾಂಶಗಳು   ಗಟ್ಟಿಗೊಳ್ಳುವುದರೊಂದಿಗೆ   ಕಲಿಕೆಯೂ

ಆಸಕ್ತಿಕರವಾಗಿರುತ್ತದೆ.

  • ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರವನ್ನು ಗಮನಿಸಿ ಸ್ವತಃ ಕಲಿಯಬೇಕಾz ಅಂಶಗಳನ್ನು ಯೋಚಿಸುವುದು. ಉದಾಹರಣೆಗೆ: ಪ್ರಾಣಿಗಳು, ಪಕ್ಷಿಗಳು, ಕೀಟಗಳು ಇತ್ಯಾದಿ. ಇವುಗಳು ವಾಸಿಸುವ ಸ್ಥಳಗಳು, ದೇಹ ರಚನೆ, ಆಹಾರ, ಚಲನೆ, ಸಂತಾನೋತ್ಪತ್ತಿ ಮುಂತಾದ ಅಂಶಗಳನ್ನು ವಿದ್ಯಾರ್ಥಿಗಳೇ ಸ್ವತಃ ಗುರ್ತಿಸಿ ಗುಂಪುಗಳಲ್ಲಿ (ವಿಭಿನ್ನ ವಯೋಮಾನದ ಮಕ್ಕಳ ಗುಂಪು) ಚರ್ಚಿಸಿ, ತಾವು ಕಲಿತ ಅಂಶಗಳನ್ನು ಪಟ್ಟಿ ಮಾಡಿಸುವುದು. ಹೀಗೆಯೇ, ತಮ್ಮ ಸುತ್ತಮುತ್ತಲಿನ ಪವಾಸಿ ಸ್ಥಳಗಳು, ಅವುಗಳ ಮಹತ್ವ, ದೇವಾಲಯಗಳು, ಅವುಗಳ ಇತಿಹಾಸ ಇವುಗಳನ್ನು ಸಾಧ್ಯವಾದ ಮಟ್ಟಿಗೆ ಮಕ್ಕಳೇ ತಿಳಿಯಲು ಅಥವಾ ಹಿರಿಯರಿಂದ ತಿಳಿದುಕೊಳ್ಳಲು ಪ್ರೇರೇಪಿಸುವುದು.  ನಂತರ  ಶಿಕ್ಷಕರು  ನಿರ್ದಿಷ್ಟವಾಗಿ  ಇವುಗಳಿಗೆ  ಸಂಬಂಧಿಸಿದ  ಕಲಿಕಾಂಶಗಳನ್ನು ಸ್ಪಷ್ಟಪಡಿಸುವುದು.
  • ಭಾಷೆಗೆ ಸಂಬಂಧಿಸಿದಂv ಪರಿಸರದಲ್ಲಿರುವ ಬೆಟ್ಟ ಗುಡ್ಡಗಳು, ಗಿಡ ಮರಗಳು, ಪ್ರಾಣಿ ಪಕ್ಷಿಗಳು, ಜನರ ಸಾಮಾನ್ಯ  ಉದ್ಯೋಗ ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ತಮಗೆ ಬಂದ ಭಾವನೆಗಳನ್ನು ಪದ್ಯ/ಗದ್ಯ ರೂಪದಲ್ಲಿ ವ್ಯಕ್ತಪಡಿಸುವುದನ್ನು ಪ್ರೇರೇಪಿಸುವುದು.
  • ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವಾಗ ಮಕ್ಕ¼ ಪರಿಸರದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ಮಾಡುವ ಚಟುವಟಿಕೆಗಳನ್ನೇ ಸಾಧ್ಯವಾದಷ್ಟು ಎಲ್ಲಾ ವಿಷಯಗಳಲ್ಲಿ ನೀಡಬೇಕು. ಮನೆಯಲ್ಲಿ ಕುಳಿತು ಮಾಡುವಂತಹ ದೀರ್ಘಾವಧಿಯ  (ಒಂದು  ವಾರದಿಂದ  ಹತ್ತು  ದಿನಗಳವರೆಗೆ  ಮಾಡಬಹುದಾದ)  ಪ್ರಾಜೆಕ್ಟ್‍ಗಳನ್ನು ವಿದ್ಯಾರ್ಥಿಗಳಿಂದ ಮಾಡಿಸುವುದು. ಉದಾಹರಣೆಗೆ, ತಮ್ಮ ಮನೆಯಲ್ಲಿ ಒಂದು ವಾರದಲ್ಲಿ ಬಳಸಲ್ಪಡುವ ರಾಗಿ/ಅಕ್ಕಿ/ಬೇಳೆ, ತರಕಾರಿ ಇತ್ಯಾದಿಗಳ ಪಮಾಣಗಳನ್ನು ಹಿರಿಯರ ಸಹಾಯದಿಂದ ತಿಳಿದು ಅವುಗಳ ಪಟ್ಟಿ ತಯಾರಿಸುವುದು. ಇದರಿಂದ ಒಂದು ತಿಂಗಳಿಗೆ ಅಗತ್ಯವಾದ ವಸ್ತುಗಳ ಪ್ರಮಾಣವನ್ನು ಲೆಕ್ಕ ಹಾಕುವುದು. ಒಂದು ದಿನ ತಮ್ಮ ಮನೆಯಲ್ಲಿ ಬಳಸುವ ನೀರಿನ ಪ್ರಮಾಣ, ಒಂದು ವಾರದಲ್ಲಿ ಬಳಸುವ ಪ್ರಮಾಣ, ಹೀಗೆ ಬಳಸಿದಲ್ಲಿ ಒಂದು ತಿಂಗಳಿಗೆ ಅಗತ್ಯವಾಗುವ ನೀರಿನ ಪ್ರಮಾಣ ಮುಂತಾದವುಗಳನ್ನು ಲೆಕ್ಕ ಮಾಡುವುದು. ಇದೇ ರೀತಿ ದೈನಂದಿನ ಚಟುವಟಿಕೆಗಳನ್ನು ಗುರ್ತಿಸಿ, ಅವುಗಳಿಗೆ ಸಂಬಂಧಿಸಿದ ದೀರ್ಘಾವಧಿಯ ಪ್ರಾಜೆಕ್ಟ್‍ಗಳನ್ನು ಮಾಡಿಸಿ, ದಾಖಲಿಸುವುದು.

➢  ಮನೆಗೆ ತಂದ ವಸ್ತುಗಳ ರ್ಯಾಪರ್‍ಗಳನ್ನು ಸಂಗ್ರಹಿಸಿ, ಅವುಗಳಲ್ಲಿರುವ ಇಂಗ್ಲಿಷ್ ಪದಗಳನ್ನು ಗುರ್ತಿಸುವುದು ಹಾಗೂ ವಸ್ತುವನ್ನು ಗಮನಿಸಿ ಆ ಪದಗಳ ಅರ್ಥವನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು.

➢  ಪ್ರತಿದಿನ ಮನೆಯಲ್ಲಿ ಮಾತನಾಡುವ ಭಾಷೆಯಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಇಂಗ್ಲಿಷ್ ಪದಗಳನ್ನು ಪಟ್ಟಿ ಮಾಡಲು ತಿಳಿಸುವುದು. ಉದಾಹರಣೆ: ಗ್ಲಾಸ್, ಶರ್ಟ್, ಮ್ಯಾಟ್ ಇತ್ಯಾದಿ. ಇವುಗಳ ಸ್ಪೆಲಿಂಗ್ ಬರೆಸಿ, ಅವುಗಳನ್ನು ವಾಕ್ಯರೂಪದಲ್ಲಿ ವ್ಯಕ್ತಪಡಿಸುವುದನ್ನು ಅಭ್ಯಾಸ ಮಾಡಿಸುವುದು.

➢  ವಿದ್ಯಾರ್ಥಿಗಳಿಂದ ತಾವು ಕಲಿತ ವಿಷಯಗಳ ಸ್ವಯಂ ಮೌಲ್ಯಮಾಪನವನ್ನು ಕೈಗೊಳ್ಳಲು ಪ್ರೇರೇಪಿಸಿ, ಸೂಕ್ತವಾದ ಮಾರ್ಗದರ್ಶನವನ್ನು ನೀಡುವುದು.

ಶಿಕ್ಷಕರು ವಿದ್ಯಾರ್ಥಿಗಳಿಂದ ಸುಲಭವಾಗಿ ಮಾಡಿಸಬಹುದಾದ ಕೆಲವು ಚಟುವಟಿಕೆಗಳನ್ನು ಮೇಲೆ ಸೂಚ್ಯವಾಗಿ ತಿಳಿಸಲಾಗಿದೆ. ಇದೇ ರೀತಿಯ ಚಟುವಟಿಕೆಗಳನ್ನು ಬೇರೆ ಬೇರೆ ವಿಷಯಗಳಲ್ಲಿ, ತಮ್ಮ ಕಲಿವಿನ ಸನ್ನಿವೇಶಕ್ಕೆ ಅನುಗುಣವಾಗಿ ಶಿಕ್ಷಕರು ರೂಪಿಸಿಕೊಳ್ಳಬಹುದು.

  • ಸಹವರ್ತಿಗಳಿಂದ ಮೌಲ್ಯ ಮಾಪನವನ್ನೂ ಮಾಡಿಸಬಹುದು. ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳೇ ಪ್ರಶ್ನೆಗಳನ್ನು ರೂಪಿಸುವ ಸಾಮಥ್ರ್ಯವನ್ನು ಬೆಳೆಸುವುದು.
  • ಅಭ್ಯಾ¸ ಪುಸ್ತPಗಳ ಸಮರ್ಪಕ ಬಳಕೆ: ಎಲ್ಲಾ ಮಕ್ಕಳಿಗೆ ಅಭ್ಯಾಸ ಪುಸ್ತಕಗಳನ್ನು ಒದಗಿಸುವುದರಿಂದ ದೈನಂದಿನ ಅಥವಾ ಮೌಲ್ಯಮಾಪನ ಚಟುವಟಿಕೆಗಳನ್ನು ರೂಪಿಸುವಾಗ ಅಭ್ಯಾಸ ಪುಸ್ತಕದಲ್ಲಿನ ಚಟುವಟಿಕೆಗಳನ್ನು ಬಳಸಿಕೊಳ್ಳಬಹುದು.
  • ವಿವಿz ಕಲಿಕಾ ಕೋಣೆಗಳಿಗೆ Zಟುವಟಿಕೆಗಳು: ತಂತ್ರಜ್ಞಾನ ಆಧರಿತ ಕಲಿಕಾ ಕೋಣೆಯಲ್ಲಿನ ಮಕ್ಕಳಿಗೆ ಶೈಕ್ಷಣಿಕ ಯೋಜನೆಯಲ್ಲಿ ಸೂಚಿಸಿರುವ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಲು ಸೂಕ್ತ ಮಾರ್ಗದರ್ಶನವನ್ನು ಮಕ್ಕಳಿಗೆ ನೀಡುವುದು.
  • ಯಾವುದೇ ತಂತ್ರಜ್ಞಾನ ಹೊಂದಿರದ ಕಲಿಕಾ ಕೋಣೆಯಲ್ಲಿ£ ಮಕ್ಕಳಿಗೆ ಶಿಕ್ಷಕರೇ ತಮ್ಮ ಮೊಬೈಲ್/ಲ್ಯಾಪ್ ಟಾಪ್ ಮೂಲಕ ಡಿಜಿಟಲ್ ಸಂಪನ್ಮೂಲಗ¼ ಲ¨್ಯತೆಯನ್ನು ಒದಗಿ¸ಬಹುದು.

ಹೀಗೆ ಚಟುವಟಿಕೆಗಳನ್ನು ರೂಪಿಸುವಾಗ ಶಿಕ್ಷಕರು ಗಮನಿಸ¨ೀಕಾz ಅಂಶಗಳು:

  • ಪ್ರತಿ ತರಗತಿಯ ವಿವಿಧ ವಿಷಯಗಳಲ್ಲಿನ ಸಾಮಾನ್ಯ ಕಲಿಕಾಂಶಗಳನ್ನು ಗುರ್ತಿಸಿ, ಅವುಗಳಿಗೆ ಸಂಬಂಧಿಸಿದ ಸಾಮಥ್ರ್ಯಗಳನ್ನು ಪಟ್ಟಿ ಮಾಡಿಕೊಳ್ಳುವುದು;
  •  ಹೀಗೆ ಪಟ್ಟಿ ಮಾಡಿಕೊಂಡ ಸಾಮಥ್ರ್ಯಗಳಿಗೆ ಪೂರಕವಾದ ಕಲಿವಿನ ಫಲಗಳನ್ನು ಗುರ್ತಿಸುವುದು;
  • ಕಲಿಕಾ  ಫಲಗಳನ್ನು  ಸಾಧಿಸಲು  ಸಾಧ್ಯವಾಗುವ  ಚಟುವಟಿಕೆಗಳನ್ನು  –    ವಿದ್ಯಾರ್ಥಿಗಳೇ  ಸ್ವತಃ ಮಾಡಬಹುದಾದ/ಹಿರಿಯರ  ಸಹಕಾರದಿಂದ  ಮಾಡಬಹುದಾದ  ಮತ್ತು  ಶಿಕ್ಷಕರ  ಸಹಾಯದಿಂದ ಮಾಡಬಹುದಾದ - ಹೀಗೆ ವಿವಿಧ ರೀತಿಗಳಲ್ಲಿ ಯೋಜಿಸುವುದು.
  • ವಿದ್ಯಾರ್ಥಿಗಳು ಕಲಿವಿನ ಪಕ್ರಿಯೆಯಲ್ಲಿ ಮುಂದುವರೆದಂತೆ, ಪಠ್ಯ ಪುಸ್ತಕವನ್ನು ಸ್ವತಃ ಓದಿ ಮನನ ಮಾಡಿಕೊಳ್ಳುವ, ಗುಂಪುಗಳಲ್ಲಿ ಚರ್ಚಿಸಿ ಆಳವಾಗಿ ತಿಳಿದುಕೊಳ್ಳುವ ಅವಕಾಶಗಳನ್ನು ಕಲ್ಪಿಸಿಕೊಡುವುದು.
  •  ವಿದ್ಯಾರ್ಥಿಗಳಿಗೆ ಕಲಿಯಲು ಕಠಿಣವೆನಿಸಿದ ಅಂಶಗಳನ್ನು ಶಿಕ್ಷಕರು ತಿಳಿಸಿಕೊಡುವುದು.
  •  ಕಲಿವಿನ ಪ್ರಗತಿಯಾದಂತೆ ಮಕ್ಕಳು ಪರಿಕಲ್ಪನೆಗಳನ್ನು ಗಟ್ಟಿಗೊಳಿಸಿಕೊಳ್ಳಲು ಶಿಕ್ಷಕರು ಸಹಾಯ ಮಾಡುವುದು.

9 ಮತ್ತು 10ನೇ ತರಗತಿಗಳು

  •  ಕೋವಿಡ್ -19ರ ಹಿನ್ನಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಔಪಚಾರಿಕ ಶಿಕ್ಷಣವನ್ನು ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಂಡಿದೆ.  ಸದರಿ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಶಿಕ್ಷಕರು ನಿರಂತರ ಸಂಪರ್ಕದಲ್ಲಿದ್ದು ಸ್ವಯಂ ಕಲಿಕೆಗೆ ಪ್ರೇರೇಪಿಸಿ ಅವರಲ್ಲಿ ಮೂಲ ಸಾಮಥ್ರ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಇರುತ್ತದೆ.   ಈ ಹಿನ್ನಲೆಯಲ್ಲಿ ಈಗಾಗಲೇ “ಸಂವೇದ” ಕಾರ್ಯಕ್ರಮದಲ್ಲಿ 9, 10ನೇ ತರಗತಿಗಳ ಪಾಠಗಳು ದೂರದರ್ಶನದ ಚಂದನ ವಾಹಿನಿಯಲ್ಲಿ  ಆನ್‍ಲೈನ್ ಪ್ರಸಾರವಾಗುತ್ತಿದೆ.    ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮಗಳನ್ನು ದೂರದರ್ಶನಗಳಲ್ಲಿ  ಪ್ರಸಾರವಾದ  ಸಮಯದಲ್ಲಿ  ಅಥವಾ  ಯೂಟ್ಯೂಬ್  ಚಾನಲ್‍ಗಳಲ್ಲಿ  ಮೊಬೈಲ್ ಮೂಲಕ ವೀಕ್ಷಿಸುತ್ತಿದ್ದಾರೆ.
  • ಈ ಪಾಠಗಳನ್ನು ಇಲಾಖೆ ನಿಗದಿಪಡಿಸಿರುವ ವಾರ್ಷಿಕ ಕಾರ್ಯ ಯೋಜನೆ ಪ್ರಕಾರ ರಾಜ್ಯಾದ್ಯಂತ ಪ್ರಚುರಪಡಿಸಲಾಗುತ್ತಿದೆ.   ನುರಿತ ಶಿಕ್ಷಕರು ಈ ಪಾಠಗಳನ್ನು ಕಲಿಕಾ ಫಲಗಳಿಗೆ ಹೊಂದಿಸಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವೀಕ್ಷಿಸಿದ ಪಾಠಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಕಲಿಯಲು ಪುನರ್‍ಬಲನ ಮಾಡುವುದು ಅತ್ಯವಶ್ಯಕವಾಗಿದೆ.
  •  9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಸಾಮಥ್ರ್ಯಗಳನ್ನು ಬೆಳೆಸುವ ಜೊತೆಗೆ ಮೂಲ ಪರಿಕಲ್ಪನೆಯನ್ನು ಕಲಿಸುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ.
  • ಪ್ರತೀ ವಾರ ಸಂವೇದ ಕಾರ್ಯಕ್ರಮದಲ್ಲಿ 9 ಮತ್ತು 10ನೇ ತರಗತಿಗಳಿಗೆ ಎಲ್ಲಾ ವಿಷಯಗಳ ಪಠ್ಯಕ್ರಮದ ಅವಶ್ಯಕತೆಗೆ ಅನುಗುಣವಾಗಿ ತರಗತಿಗಳನ್ನು ನಿಗದಿಪಡಿಸಲಾಗಿದೆ.
  • ವಿದ್ಯಾಗಮ ಕಾರ್ಯಕ್ರಮದಲ್ಲಿ 3 ವಿಧದ ತರಗತಿ ಕೋಣೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಶಿಕ್ಷಕರು, ಪುನರ್‍ಬಲನ  ಚಟುವಟಿಕೆಗಳನ್ನು  ನೀಡಲು  ಸಲಹಾತ್ಮಕ  ಚಟುವಟಿಕೆಗಳು,  ಅನುಬಂಧ-1  ರಿಂದ ಅನುಬಂಧ-6ರವರೆಗೆ ವಿಷಯವಾರು ಸೆಪ್ಟೆಂಬರ್ ಮಾಹೆಯ 4 ವಾರಗಳಿಗೆ ನೀಡಿದೆ.
  • ವಿದ್ಯಾರ್ಥಿಗಳು  ಸಂವೇದದಲ್ಲಿ  ಪಾಠ  ವೀಕ್ಷಿಸಿದ  ನಂತರ  ಮನೆಯಲ್ಲಿ  ಸ್ವಕಲಿಕೆಗಾಗಿ  ಸೂಚಿಸಿರುವ ಚಟುವಟಿಕೆಗಳನ್ನು ನಿರ್ವಹಿಸುವಂತೆ ಮಾರ್ಗದರ್ಶಿ ಶಿಕ್ಷಕರು ತಿಳಿಸಬೇಕಾಗಿರುತ್ತದೆ.  ಈ ಚಟುವಟಿಕೆಗಳು ಸದರಿ ವಾರದಲ್ಲಿ ಅಥವಾ ಹಿಂದಿನ ವಾರದಲ್ಲಿ ಸಂವೇದ ಕಾರ್ಯಕ್ರಮದಲ್ಲಿ ವೀಕ್ಷಿಸಿರುವ ಪಾಠದ ಪುನರ್‍ಬಲನ ಚಟುವಟಿಕೆಯಾಗಿರುತ್ತದೆ.
  • ಎಲ್ಲಾ ವಿಷಯ ಶಿಕ್ಷಕರು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಮಾರ್ಗದರ್ಶಿ ಶಿಕ್ಷಕರ ಮೂಲಕ ಪುನರ್‍ಬಲನ ಚಟುವಟಿಕೆಗಳು/ಅಭ್ಯಾಸ ಹಾಳೆಗಳು ತಲುಪುವಂತೆ ಕ್ರಮ ವಹಿಸುವುದು.
  • ವಿದ್ಯಾರ್ಥಿಗಳು ನಿರ್ವಹಿಸಿದ ಚಟುವಟಿಕೆಯನ್ನು ಮಾರ್ಗದರ್ಶಿ ಶಿಕ್ಷಕರು ಹಿಂಪಡೆದು ವಿಷಯ ಶಿಕ್ಷಕರಿಗೆ ತಲುಪಿಸುವುದು. 
  • ವಿಷಯ ಶಿಕ್ಷಕರು ವಿದ್ಯಾರ್ಥಿಗಳು ನಿರ್ವಹಿಸಿರುವ ಹಾಳೆಗಳನ್ನು ಅವಲೋಕಿಸಿ, ಮೊಬೈಲ್ ಅಥವಾಮಾರ್ಗದರ್ಶಿ ಶಿಕ್ಷಕರ ಮೂಲಕ ಹಿಮ್ಮಾಹಿತಿ ನೀಡಿ ಸದರಿ ವಿಷಯದ ಬಗ್ಗೆ ಹೆಚ್ಚು ಅಭ್ಯಾಸ ಮಾಡುವಂತೆ ಮಾರ್ಗದರ್ಶನ ನೀಡುವುದು.
  • 9  ಮತ್ತು  10ನೇ  ತರಗತಿ  ಮೌಲ್ಯಮಾಪನ:  ಮೌಲ್ಯಮಾಪನ  ಕಾಲಂನಲ್ಲಿ  ಸೂಚಿಸಿರುವ  ಎರಡು ಚಟುವಟಿಕೆಗಳು ಅಥವಾ ಶಿಕ್ಷಕರಿಗೆ ಸೂಕ್ತವೆನಿಸಿದ ಚಟುವಟಿಕೆಗಳು (15+15) ಹಾಗೂ ಒಂದು ಪೆನ್ನು ಮತ್ತು ಪೇಪರ್ ಟೆಸ್ಟ್ (20) ನಿರ್ವಹಿಸಿ ಒಟ್ಟು ಈಂ1ಗೆ ಅನುಗುಣವಾಗಿ (15+15+20=50) ಮೌಲ್ಯಮಾಪನ ಕಾರ್ಯ ನಿರ್ವಹಿಸತಕ್ಕದ್ದು.

logoblog

Thanks for reading ವಿದ್ಯಾಗಮ ಕಾರ್ಯಕ್ರಮದಲ್ಲಿ 4 ರಿಂದ 10 ನೇ ತರಗತಿಗಳಿಗೆ ಸಿದ್ದಪಡಿಸಿರುವ ಪರ್ಯಾಯ ಶೈಕ್ಷಣಿಕ ಯೋಜನೆ

Previous
« Prev Post

No comments:

Post a Comment