Karnataka One

Information of Karnataka

Friday 4 September 2020

ಶಿಕ್ಷಕರ ದಿನಾಚರಣೆಯಂದು ಡಾ.ಅಬ್ದುಲ್‍ಕಲಾಂ ಶಿಕ್ಷಕರಿಗೆ ಬೋಧಿಸಿದ ದೀಕ್ಷೆ

Admin       Friday 4 September 2020

 ಶಿಕ್ಷಕರ ದಿನಾಚರಣೆಯಂದು ಡಾ.ಅಬ್ದುಲ್‍ಕಲಾಂ ಶಿಕ್ಷಕರಿಗೆ ಬೋಧಿಸಿದ ದೀಕ್ಷೆ :

ಬೋಧನೆ ನನ್ನ ಪ್ರೀತಿಯ ಕೆಲಸ, ಬೋಧನೆಯೇ ನನ್ನ ಆತ್ಮ, ಬೋಧನೆ ಎಂಬ ಕಾಯಕಕ್ಕೆ ನಾನು ಸಂಪೂರ್ಣವಾಗಿ ಬದ್ದನಾಗಿದ್ದೇನೆ. ಸಾಧಾರಣ ವಿದ್ಯಾರ್ಥಿಯನ್ನು ಉತ್ತಮ ವಿದ್ಯಾರ್ಥಿಯಾಗಿ ಮಾಡುವ ಸಾಮಥ್ರ್ಯವಿದ್ದರೆ ಮಾತ್ರ ನನ್ನನ್ನು ನಾನು ಉತ್ತಮ ಶಿಕ್ಷಕನೆಂದು ಬಗೆಯುತ್ತೇನೆ. ವಿದ್ಯಾರ್ಥಿಗಳಿಗೆ ಅನುಕರಣೀಯವಾದ ಆದರ್ಶಪ್ರಾಯ ಜೀವನವನ್ನು ಸಾಗಿಸುತ್ತೇನೆ. ನನ್ನ ಜೀವನವೇ ವಿದ್ಯಾರ್ಥಿಗಳಿಗೆ ನಾನು ನೀಡುವ ಸಂದೇಶ. ಜಾತಿ- ಮತ –ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಯಾವುದೇ ಅಸಮಾನತೆಯನ್ನು ಬೆಂಬಲಿಸುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ಸಮಾನತೆಯಿಂದ ನೋಡಿಕೊಳ್ಳುತ್ತೇನೆ – ಅಬ್ದುಲ್‍ಕಲಾಂ.

ಉತ್ತಮ ಶಿಕ್ಷಕರು ಹೇಗಿರಬೇಕು ?

  • ಶಿಕ್ಷಕರ ಭಾಷೆ ಸ್ಪಷ್ಟವಾಗಿರಬೇಕು
  • ಉಚ್ಚಾರಣೆಯಲ್ಲಿ ದೋಷವಿರಬಾರದು.
  • ನಗು ನಗುತ್ತಾ ತರಗತಿಗೆ ಪ್ರವೇಶಿಸಬೇಕು
  • ಎಲ್ಲಾ ವಿದ್ಯಾರ್ಥಿಗಳನ್ನೂ ಒಂದೇ ರೀತಿಯಲ್ಲಿ ನೋಡಬೇಕು
  • ಕುಲ-ಮತಗಳ ಅಭಿಮಾನವನ್ನು ಪಾಠಶಾಲೆಯಲ್ಲಿ ತೋರಿಸಬಾರದು.
  • ಇತರ ಶಿಕ್ಷಕರೊಂದಿಗೆ ಮಾರ್ಯಾದೆಯಿಂದ ಮಾತನಾಡಬೇಕು.
  • ತಂದೆತಾಯಿಯರಿಗೆ ಮಕ್ಕಳ ಪರಿಸ್ಥಿತಿಯನ್ನು ಹೇಳುತ್ತಿರಬೇಕು.
  • ಎಲ್ಲರ ಅಭಿಮಾನವನ್ನು ಗಳಿಸಲು ಪ್ರಯತ್ನಿಸಬೇಕು. 
  • ಕೋಪ-ಆವೇಶಗಳನ್ನು ಹಿಡಿದಿಟ್ಟುಕೊಳ್ಳಬೇಕು.
  • ಜಿಗುಪ್ಸೆ ಹುಟ್ಟಿಸುವ ಆಧುನಿಕ ಉಡುಪುಗಳನ್ನು ಧರಿಸಬಾರದು.
  • ಆತ್ಮವಿಶ್ವಾಸವಿರಬೇಕು.
  • ಅಂಗವೈಕಲ್ಯವಿರುವವರನ್ನು ಪ್ರೀತಿಯಿಂದ ಕಾಣಬೇಕು.
  • ತರಗತಿಗೆ ಪ್ರವೇಶಿಸುತ್ತಲೆ ‘ಗುಡ್‍ಮಾರ್ನಿಂಗ್ ಸ್ಟೂಡೆಂಟ್ಸ್ ‘ ಎನ್ನಬೇಕು.
  • ಮಕ್ಕಳನ್ನು ಹೆಸರು ಹಿಡಿದು ಕೂಗಿದರೆ ಪ್ರೇರಣೆಯನ್ನು ಪಡೆಯುತ್ತಾರೆ.
  • ಇತರ ಟೀಚರ್‍ಗಳ ಮೇಲೆ ಜೋಕ್ಸ್ ಮಾಡಬಾರದು.
  • ಪಾಠಗಳನ್ನು ಸೃಜನಾತ್ಮಕವಾಗಿ  ಮಾಡಬೇಕು.
  • ತಮಗಿಂತ ಹಿರಿಯ ಶಿಕ್ಷಕರೊಂದಿಗೆ ವಿನಯದಿಂದ ಮಾತನಾಡಬೇಕು.
  • ಸರಿಯಾದ ಸಮಯಕ್ಕೆ ಬಂದು ಸಮಯಪಾಲನೆ ಮಾಡಬೇಕು.
  • ರಾಜಕೀಯ, ಇತರ ಗೊಡವೆಗಳ ಪ್ರಸ್ತಾಪ ತರಗತಿಯಲ್ಲಿ ಮಾಡಬಾರದು.
  • ತರಗತಿಯಲ್ಲಿ ಒಬ್ಬನೇ ವಿದ್ಯಾರ್ಥಿಯನ್ನು ಮತ್ತೇ ಮತ್ತೇ ಹೊಗಳಬಾರದು.
  • ಮಕ್ಕಳ ಮೇಲೆ ವ್ಯಂಗ್ಯವಾಗಿ ಜೋಕುಗಳನ್ನು ಮಾಡಕೂಡದು.
  • ಜಾತಿಯ ಹೆಸರಿನಲ್ಲಿ ದೂಷಿಸಬಾರದು.
  • ವ್ಯವಸ್ಥೆಯನ್ನು ದೂಷಿಸಬಹುದೇ ಹೊರತು ವ್ಯಕ್ತಿಗಳನ್ನಲ್ಲ.
  • ಯಾವ ಮಕ್ಕಳನ್ನು ಕೆಟ್ಟವರಿಗೆ ಹೋಲಿಸಬಾರದು.
  • ತಪ್ಪನ್ನು ಒಪ್ಪಿಕೊಂಡ ವಿದ್ಯಾರ್ಥಿಯನ್ನು ಅಭಿನಂದಿಸಿರಿ.

ಅದಕ್ಕೆ ಹೇಳುವುದು “There are no bad students, they are made as bad students ”  ಎಂದು.
ಆದ್ದರಿಂದ ಮಕ್ಕಳ ಮನಸ್ಸಿಗೆ ಹತ್ತಿರವಾಗಬೇಕಾದರೆ ಶಾಲೆಗೆ ಹೋದ ಶಿಕ್ಷಕರು ಆ ವೇಳೆಯಲ್ಲಿ ಮಕ್ಕಳಲ್ಲಿ ಪರಕಾಯ ಪ್ರವೇಶ ಮಾಡಿದರೆ ಒಳ್ಳೆಯದು. ಆಗಲೇ ಉತ್ತಮ ಶಿಕ್ಷಕರಾಗಬಹುದು. ಜನಮೆಚ್ಚಿದ ಶಿಕ್ಷಕರಾಗುವುದು ಬೇಡ, ಮಕ್ಕಳ ಮೆಚ್ಚುವ ಶಿಕ್ಷಕರಾದರೆ ಸಾಕು.
ಉತ್ತಮ ಶಿಕ್ಷಕರೆಂದರೇ ಸರ್ಕಾರದಿಂದ ಬಹುಮಾನ ಗಳಿಸಿದವರು ಮಾತ್ರವಲ್ಲ. ಎಲ್ಲಾ ಅರ್ಹತೆಗಳಿದ್ದರೂ ಬಹುಮಾನ ದೊರೆಯದವರೂ ಎಷ್ಟೋ ಮಂದಿ ಇದ್ದಾರೆ.
ಶಿಕ್ಷಕ ವೃತ್ತಿಯಲ್ಲಿರುವವರು ತಮ್ಮ ಮನೋಭಾವದಲ್ಲಿ ಈ ಲಕ್ಷಣಗಳನ್ನು ಬೆಳೆಸಿಕೊಳ್ಳಬೇಕು.
  • ಶಿಕ್ಷಕರ ಧ್ಯಾನವೆಲ್ಲಾ ಓದಿನ ಕಡೆಗೆ ಇರಬೇಕು.ಮಕ್ಕಳನ್ನು ಚೆನ್ನಾಗಿ ತಿದ್ದಲು ತಕ್ಕ ರೀತಿಯಲ್ಲಿ ತಮ್ಮ ಮನೋಭಾವವನ್ನು ಬದಲಿಸಿಕೊಳ್ಳುತ್ತಾ, ಸಂಧರ್ಭಾನುಸಾರವಾಗಿ ಬದಲಾವಣೆ,  ಸೇರ್ಪಡೆಗಳನ್ನು ಮಾಡಿಕೊಳ್ಳುತ್ತಾ ಯಾವಾಗಲೂ ಮೊದಲಿದರಾಗಬೇಕು.
  • ಶಾಲೆಗೆ ಬರುವ ಎಲ್ಲಾ ಮಕ್ಕಳನ್ನು ಒಂದೇ ರೀತಿ ಅಭಿಮಾನದಿಂದ ನೋಡಬೇಕು.ತಿಳಿದವರ ಮಕ್ಕಳಿಗೆ, ದೊಡ್ಡವರ ಮಕ್ಕಳಿಗೆ ಪ್ರತ್ಯೇಕ  ಟ್ರೀಟ್‍ಮೆಂಟ್ ಕೊಡಬಾರದು. ಇದರಿಂದ ಆ ಮಕ್ಕಳಲ್ಲಿ ಅಹಂಕಾರ ಬೆಳೆಯಬಹುದು ಇಲ್ಲವೇ ಉಳಿದ ಮಕ್ಕಳು ಅಭದ್ರತಾ ಭಾವನೆಗೆ ಗುರಿಯಾಗಬಹುದು.
  • ಶಿಕ್ಷಕರು ತಾವು ಹೇಳುವ ವಿಷಯಕ್ಕೆ ಸಂಬಂಧಿಸಿದ ಹೊಸ ಹೊಸ ಪುಸ್ತಕಗಳನ್ನು ಓದುತ್ತಿರಬೇಕು,ಜರ್ನಲ್‍ಗಳನ್ನು ಓದಬೇಕು. ಸಾಧ್ಯವಾದರೆ ಕೆಲವು ಪ್ರತ್ಯೇಕವಾದ ಲೇಖನಗಳನ್ನು ಬರೆದು ಪ್ರಕಟಣೆಗೆ ಕಳುಹಿಸಬೇಕು.ಅವು ನಂತರದ ಪಿ.ಎಚ್.ಡಿಗೆ ನೆರವಾಗಬಹುದು.
  • ತನ್ನ ಮೇಲಾಧಿಕಾರಿಗಳು, ಹಿರಿಯ ಶಿಕ್ಷಕರು, ತಂದೆತಾಯಂದಿರು ........ಹೀಗೆ ಹಿರಿಯವರನ್ನೆಲ್ಲಾ ಗೌರವಿಸಬೇಕು. ಎಂತಹ ಪರಿಸ್ಥಿತಿಯಲ್ಲೂ ಅವರುಗಳೊಂದಿಗೆ ಜಗಳಕ್ಕಿಳಿಯಬಾರದು. ಅಂತಹ ಪರಿಸ್ಥಿತಿ ಬಂದಾಗ ಮೆದುಮಾತಿನಲ್ಲಿ ಹೇಳಬೇಕು.
  • ‘ಕೇಳಲಾರದವನು ಹೇಳಲಾರ’ ಎನ್ನುತ್ತಾರೆ ಅನುಭವಿಗಳು, ಆದ್ದರಿಂದ ಶಿಕ್ಷಕರು ಬೇರೆಯವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿರಬೇಕು. ಕೇಳಿಸಿಕೊಳ್ಳುವುದರಿಂದ ನಷ್ಟವೇನಿಲ್ಲ. ಕೇಳಿಸಿಕೊಳ್ಳುವುದರಿಂದ ಹೇಗೆ ಮಾತನಾಡಬಹುದೋ, ಇಲ್ಲವೇ ಹೇಗೆ ಮಾತನಾಡಬಾರದೆಂದು ತಿಳಿಯುತ್ತದೆ.
  • ಶಿಕ್ಷಕರು ಎಲ್ಲರೊಂದಿಗೆ ಚೆನ್ನಾಗೆ ಸಂಭಾಷಣೆ ಮಾಡಬಲ್ಲವರಾಗಿರಬೇಕು. ಎದುರಿನವರೂ ಎಂತಹವರೇ ಆಗಿದ್ದರೂ ನೀವು ನಿಮ್ಮ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಬೇಕು.
  • ಆಶಾವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಪಾಸಿಟಿವ್ ಥಿಂಕಿಂಗ್‍ನಿಂದ ನಿರಾಸೆ, ನಿಸ್ಪøಹತೆಗಳನ್ನು ಬಿಟ್ಟು ಪ್ರತಿಕೂಲ ಪರಿಸ್ಥಿತಿಯಲ್ಲೂ ಸ್ಥಿರವಾಗಿರಬಲ್ಲಿರಿ.
  • ಶಿಕ್ಷಕರು ಸೇವೆಯೇ ತಮ್ಮ ಗುರಿಯಾಗಿ ಭಾವಿಸಬೇಕು.’ನಾನು ಈ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಲ್ಲೆ ? ಈ ವಿದ್ಯಾರ್ಥಿಗಳನ್ನು ಹೇಗೆ ತಿದ್ದಬಲ್ಲೇ ? ಎಂದು ಆಲೋಚಿಸಬೇಕು. ಹಾಗೆ ಆಲೋಚಿಸಿ ಅದ್ಬುತ ವ್ಯಕ್ತಿಗಳನ್ನು ಸೃಷ್ಟಿಸಿದ ಶಿಕ್ಷಕರಿದ್ದಾರೆ.
  • ಇರುವ ಸ್ಥಳದಲ್ಲೇ ಯಾವಾಗಲೂ ಇರಬೇಕೆಂದು ಭಾವಿಸಬಾರದು. ವರ್ಗಾವಣೆಗಳನ್ನು ಒಪ್ಪಿಕೊಳ್ಳಬೇಕು.ಅಹ್ವಾನಿಸಬೇಕು. ಕಷ್ಟವಾದರೂ ಇಷ್ಟಪಡಬೇಕು. ಕಮ್‍ಪರ್ಟ್‍ಜೋನ್‍ನಿಂದ ಹೊರಬರಬೇಕು.
  • ಭಾವಾವೇಶಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಆವೇಶ ಅತಿಕೋಪಗಳು ಹಿಡಿತದಲ್ಲಿರಬೇಕು. ಶಿಕ್ಷಕರ ಕೋಪ ಅನೇಕ ತೊಂದರೆಗಳಿಗೆ ದಾರಿಮಾಡಿಕೊಡುತ್ತದೆ.
logoblog

Thanks for reading ಶಿಕ್ಷಕರ ದಿನಾಚರಣೆಯಂದು ಡಾ.ಅಬ್ದುಲ್‍ಕಲಾಂ ಶಿಕ್ಷಕರಿಗೆ ಬೋಧಿಸಿದ ದೀಕ್ಷೆ

Previous
« Prev Post

No comments:

Post a Comment