ʼʼದಕ್ಷಿಣ ಕಾಶಿʼʼ ರಾಮನಾಥಪುರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು
Best places to visit in Ramanathapura
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿರುವ ರಾಮನಾಥಪುರ ಪುರಾಣ ಪ್ರಸಿದ್ಧವಾದದ್ದು ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ .ಈ ಸ್ಥಳ ಪವಿತ್ರ ಕಾವೇರಿ ನದಿಯ ಎಡದಂಡೆಯ ಮೇಲಿದ್ದು ಕರ್ನಾಟಕ ರಾಜ್ಯದ ಒಂದು ಪ್ರಮುಖ ಯಾತ್ರ ಮತ್ತು ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿದೆ. ರಾಮನಾಥಪುರ ಶತಶತಮಾನಗಳಿಂದ ಪವಿತ್ರ ಸ್ಥಳವಾಗಿ ಗುರುತಿಸಿಕೊಂಡಿದ್ದು ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಹೊಂದಿದೆ. ತ್ರೇತಾ ಯುಗದ ಶ್ರೀರಾಮಚಂದ್ರನು ಈಶ್ವರನ ಲಿಂಗವನ್ನು ಪೂಜಿಸಿದ ಸ್ಥಳವೆಂಬ ಕಾರಣದಿಂದ ಈ ಗ್ರಾಮಕ್ಕೆ ರಾಮನಾಥಪುರ ಎಂಬ ಹೆಸರು ಬಂದಿದೆ. ಕಾವೇರಿ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸೇವೆಯನ್ನು ಭಕ್ತಿಯಿಂದ ಮಾಡಿದರೆ ಅವರ ಜನ್ಮ ಜನ್ಮಾಂತರದ ಪಾಪ ಕರ್ಮಗಳೆಲ್ಲವೂ ಕರಗಿ ಹೋಗುವುದೆಂಬ ನಂಬಿಕೆ ಇದೆ. ಪ್ರತಿದಿನ ನೂರಾರು ಭಕ್ತಾದಿಗಳು ಯಾತ್ರಾತ್ರಿಗಳು ಮತ್ತು ಪ್ರವಾಸಿಗರು ತಮ್ಮ ಹರಕೆ ಮತ್ತು ಮನಸ್ಸಿನ ಅಭಿಷ್ಟೇಗಳನ್ನು ಭಗವಂತನ ಪೂಜಾ ಕೈಂಕರ್ಯದ ಮೂಲಕ ಈಡೇರಿಸಿಕೊಳ್ಳಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ ಡಿಸೆಂಬರ್ ಜನವರಿ ತಿಂಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ಸ್ವಾಮಿಯ ದರ್ಶನಕ್ಕೆ ಭೇಟಿ ನೀಡುತ್ತಾರೆ. ಈ ಗ್ರಾಮದಲ್ಲಿ ಹಲವಾರು ದೇವಾಲಯಗಳು ಇರುವುದರಿಂದ ದೇವಾಲಯಗಳ ಪಟ್ಟಣ ಎಂದು ಸಹ ಪ್ರಸಿದ್ಧಿಯಾಗಿದೆ. ರಾಮನಾಥಪುರ ಪಟ್ಟಣವು ಹಾಸನ, ಮೈಸೂರು ಹಾಗೂ ಮಡಿಕೇರಿ ಜಿಲ್ಲಾ ಕೇಂದ್ರಗಳಿಂದ ಬಹುತೇಕ ಕೇಂದ್ರ ಸ್ಥಳದಲ್ಲಿದ್ದು ಕರ್ನಾಟಕದ ಎಲ್ಲೆಡೆಯಿಂದಲೂ ಬಸ್ ವ್ಯವಸ್ಥೆ ಇರುತ್ತದೆ ಇದರ ಜೊತೆಗೆ ತಂಬಾಕು ಮಾರುಕಟ್ಟೆ ಅಡಿಕೆ ಮಾರುಕಟ್ಟೆ, ಕೃಷಿ ಮತ್ತು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ರಾಮನಾಥಪುರದಲ್ಲಿರುವ ಹೆಸರುವಾಸಿಯಾಗಿರುವ ದೇವಾಲಯಗಳೆಂದರೆ
೧.ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ
೨.ಶ್ರೀರಾಮೇಶ್ವರ ದೇವಾಲಯ
೩ ಶ್ರೀ ಪಟ್ಟಾಭಿರಾಮ ಸ್ವಾಮಿ ದೇವಾಲಯ
೪ ಶ್ರೀ ಅಗಸ್ತೇಶ್ವರ ಸ್ವಾಮಿ ದೇವಾಲಯ
೫ ಶ್ರೀ ರಾಘವೇಂದ್ರ ಸ್ವಾಮಿ ಮಠ ಮುಂತಾದವುಗಳು
ತಲುಪುವ ಬಗೆ
ರಾಮನಾಥಪುರವು ಹಾಸನದಿಂದ 49 ಕಿಲೋಮೀಟರ್, ಮೈಸೂರಿನಿಂದ 83 ಕಿಲೋಮೀಟರ್ ಮಡಿಕೇರಿಯಿಂದ 61 ಕಿಲೋಮೀಟರ್ ಇದೆ. ಯಾವುದೇ ರೀತಿಯ ವಿಮಾನ ಮತ್ತು ರೈಲಿನ ಸಂಪರ್ಕ ಇರುವುದಿಲ್ಲ ಎಲ್ಲಾ ಜಿಲ್ಲಾ ಕೇಂದ್ರಗಳಿಂದಲೂ ಬಸ್ಸಿನ ವ್ಯವಸ್ಥೆ ಇರುತ್ತದೆ.
ಹತ್ತಿರದ ಸ್ಥಳಗಳು
ತೂಗು ಸೇತುವೆ ಕೊಣನೂರು
ರುದ್ರಪಟ್ಟಣ
ಬೇಲೂರು
ಹಳೇಬೀಡು
ರಾಮದೇವರ ಕಟ್ಟೆ
ಶ್ರವಣಬೆಳಗೊಳ
ಗೊರೂರು ಡ್ಯಾಮ್
ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ
ಕುಶಾಲನಗರ -ದುಬಾರೆ ಫಾರೆಸ್ಟ್, ಗೋಲ್ಡನ್ ಟೆಂಪಲ್, ನಿಸರ್ಗಧಾಮ
ಮಡಿಕೇರಿ
Location
ಹತ್ತಿರದ ಪ್ರವಾಸಿ ತಾಣಗಳು
Label List
Arakalagudu
(3)
Arasikere
(8)
Attigundi
(1)
Bangalore Police catch the thieves
(1)
Bangalore Robbery Case
(1)
Belur
(4)
Benefits of Baje
(1)
Benefits of walk after dinner
(1)
Bhagamandala
(1)
Bindiga
(1)
Chamarajanagar
(5)
Channarayapatna
(1)
Chikmangalore
(16)
China Develops Longevity Pill
(1)
Coorg
(15)
Dakshina kannada
(1)
Fake ORS Banned
(1)
Gundlupete
(2)
Hanur
(1)
Hassan
(26)
Hirekolale
(1)
Holenarasipura
(2)
Hosanagara
(2)
Jio New Offer
(1)
K.R.Pete
(3)
Kadaba
(1)
Kadur
(1)
Kalasa
(2)
kesavinamane
(1)
Kollegala
(1)
Koratagere
(1)
Krishnarajapete
(3)
Kushalnagar
(4)
Madikeri
(6)
Malavalli
(1)
Manchetevaru
(1)
Mandya
(27)
Medicine for diseases
(1)
Mysore
(21)
Nagamangala
(1)
Nagarahole
(1)
Nagenahalli
(2)
Nail Biting habit
(1)
Pandaravalli
(1)
Pandavapura
(9)
Periyapatna
(1)
Sabarimala Ayyappa Temple Crowd
(1)
Sagara
(9)
Sakaleshpura
(3)
Shivamogga
(21)
Shringeri
(1)
Sira
(1)
Somwarpete
(2)
Soraba
(1)
Srirangapatna
(8)
Talakaveri
(1)
Tarikere
(4)
Thailand offer free domestic flights
(1)
Tips for healthy life style
(1)
Tips for winter season
(1)
Tirthahalli
(6)
Tumkur
(8)
Turuvekere
(2)
Udupi
(1)
Vehicle fitness fees
(1)
Weak password
(1)
Yelandur
(1)
.jpeg)
Post a Comment
Post a Comment